HEALTH TIPS

ನಾನಾ ಪಾಟೇಕರ್ OR ಸ್ಮಿತ್ ಮಚ್ಚರ್?: ಮುಂಬೈ ರೈಲು ಮೇಲ್ಸೇತುವೆಗೆ ಹೆಸರಿಡುವ ವಿವಾದ

ಮುಂಬೈ: ನಗರದ ವಿದ್ಯಾವಿಹಾರ ರೈಲು ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಲಾದ ಪೂರ್ವ-ಪಶ್ಚಿಮ ವಿದ್ಯಾವಿಹಾರ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನವೇ ಅದಕ್ಕೆ ಹೆಸರಿಡುವ ವಿಚಾರವಾಗಿ ವಿವಾದ ಭುಗಿಲೆದ್ದಿದೆ.


ಬಿಜೆಪಿ ಶಾಸಕ ಪರಾಗ್ ಶಾ ಅವರು ಈ ಸೇತುವೆಗೆ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಹೆಸರಿಡಬೇಕೆಂದು ಪ್ರಸ್ತಾಪಿಸಿದ್ದರು. 

ಇದರ ಬೆನ್ನಲ್ಲೇ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಸೇತುವೆ ಮೇಲೆ ಬ್ಯಾನರ್ ಒಂದನ್ನು ಅಳವಡಿಸಿದ್ದು, ದಿವಂಗತ ನಟ ನಾನಾ ಪಾಟೇಕರ್ ಅವರ ಹೆಸರಿಡಬೇಕೆಂದು ಆಗ್ರಹಿಸಿದೆ.

ಸೆ. 30ರಂದು ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈ ದುಬೈ ಸಂಸ್ಥೆಯ ಬೋಯಿಂಗ್‌ ವಿಮಾನವನ್ನು ವಶಕ್ಕೆ ತೆಗೆದುಕೊಂಡು ಪತನಗೊಳಿಸಲು ಸಹ ಪೈಲಟ್‌ ಯತ್ನಿಸಿದ್ದು, ವಿಮಾನ ಚಾಲನೆ ಮಾಡುತ್ತಿದ್ದ ಭಾರತ ಮೂಲದ ಪೈಲಟ್‌ ಸ್ಮಿತ್ ಮಚ್ಚರ್‌ ದುರಂತವನ್ನು ತಪ್ಪಿಸಿದ್ದರು. ವಿಮಾನದಲ್ಲಿ 174 ಪ್ರಯಾಣಿಕರಿದ್ದರು. ಹಾಗಾಗಿ ಮಚ್ಚರ್ ಅವರ ಹೆಸರನ್ನು ಈ ಸೇತುವೆಗೆ ಇಡಬೇಕೆಂದು ಶಾ ಅವರು ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಆದರೆ, ಶಿವಸೇನಾ (ಯುಬಿಟಿ) ಕಾರ್ಯಕರ್ತರು ಈ ಸೇತುವೆಗೆ 'ಪದ್ಮಶ್ರೀ ನಾನಾ ಪಾಟೇಕರ್ ಸೇತು' ಎಂದು ಹೆಸರಿಡಬೇಕೆಂದು ಒತ್ತಾಯಿಸಿ ಬ್ಯಾನರ್ ಹಾಕಿದ್ದಾರೆ.

ಇತ್ತೀಚೆಗೆ ಯುಬಿಟಿ ನಾಯಕರ ನಿಯೋಗವೊಂದು ಮುಂಬೈ ಮೇಯರ್ ರಿತು ತಾವ್ಡೆ ಅವರನ್ನು ಭೇಟಿ ಮಾಡಿ, ಸೇತುವೆಗೆ ನಾನಾ ಪಾಟೇಕರ್ ಅವರ ಹೆಸರಿಡಬೇಕೆಂದು ಮನವಿ ಪತ್ರ ಸಲ್ಲಿಸಿತ್ತು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮೇಯರ್ ರಿತು ತಾವ್ಡೆ ಅವರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ, ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಸದಸ್ಯ ಗಣೇಶ್ ಖಂಕರ್ ಮಾತನಾಡಿ, ಶಿವಸೇನಾ ಕೇವಲ ಹೆಸರು ಗಳಿಸುವ ಉದ್ದೇಶದಿಂದ ಈ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

'ನಾನಾ ಪಾಟೇಕರ್ ಅವರು ದೇಶದ ಪ್ರತಿಭಾವಂತ ನಟರಲ್ಲಿ ಒಬ್ಬರು. ಸೇತುವೆಗೆ ಅವರ ಹೆಸರಿಡುವ ಬದಲು, ಯಾವುದಾದರೂ ದೊಡ್ಡ ರಂಗಮಂದಿರ ಅಥವಾ ಸಂಕೀರ್ಣಕ್ಕೆ ಅವರ ಹೆಸರಿಡುವುದು ಹೆಚ್ಚು ಸೂಕ್ತ' ಎಂದು ಗಣೇಶ್ ಹೇಳಿದ್ದಾರೆ.

ದೀರ್ಘಕಾಲ ವಿಳಂಬವಾಗಿದ್ದ 650 ಮೀಟರ್ ಉದ್ದದ, ಎರಡು ಪಥಗಳ ವಿದ್ಯಾವಿಹಾರ್ ಸೇತುವೆಯು, ವಿದ್ಯಾವಿಹಾರ್ ರೈಲ್ವೆ ನಿಲ್ದಾಣದ ಪೂರ್ವ ಭಾಗದಲ್ಲಿರುವ ರಾಮಚಂದ್ರ ಚೆಂಬುರ್ಕರ್ ಮಾರ್ಗವನ್ನು, ಪಶ್ಚಿಮ ಭಾಗದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದೊಂದಿಗೆ ಸಂಪರ್ಕಿಸುತ್ತದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries