HEALTH TIPS

ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ ಹಾಗೂ ರಂಗಸಿರಿ ಸಮೃದ್ಧಿ ನಿಧಿಗೆ ಚಾಲನೆ

ಬದಿಯಡ್ಕ: ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ರಾಮಲೀಲಾ ಸಭಾ ಭವನದಲ್ಲಿ ನೆರವೇರಿತು.


ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ, ವ್ಯವಸ್ಥಾಪಕ ಡಾ. ಶ್ರೀಶ ಪಂಜಿತ್ತಡ್ಕ ಕಾರ್ಯಕ್ರಮದ ಹಿನ್ನೆಲೆ, ಸಂಸ್ಥೆಯ ಇತಿಹಾಸ, ಕಾರ್ಯವ್ಯಾಪ್ತಿ, ಕಾರ್ಯಚಟುವಟಿಕೆಗಳ ವಿವರ ಹಾಗೂ ಉದ್ದೇಶವನ್ನು ವಿವರಿಸುವ ಮೂಲಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. 'ರಂಗಸಿರಿ'ಯ ಅಧ್ಯಕ್ಷ, ನಿವೃತ್ತ ಶಿಕ್ಷಕಿ ಪ್ರಭಾವತಿ ಕೆದಿಲಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ 'ರಂಗಸಿರಿ ಸಮೃದ್ಧಿ ನಿಧಿ' ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಸವ್ಯಸಾಚೀ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರು ಮಾರ್ಗದರ್ಶ ನೀಡಿದರು. ಮುಖ್ಯ ಅತಿಥಿಗಳಾಗಿ ರಾಮಲೀಲಾದ ಮಾಲಿಕ, ಅರ್ಥಧಾರಿ ಲಕ್ಷ್ಮಣ ಪ್ರಭು ಕರಿಂಬಿಲ ಶುಭಹಾರೈಸಿದರು. ಸಂಸ್ಥೆಯ ವಿದ್ಯಾರ್ಥಿ ಆಸ್ತಿಕ್ ಆಳ್ವ ಪ್ರಾರ್ಥನೆಗೈದರು. ಅಧ್ಯಾಪಕ ನಿರಂಜನ್ ಸ್ವಾಗತಿಸಿ, ಕು. ಅಭಿಜ್ಞಾ ಭಟ್ ಬೊಳುಂಬು ವಂದಿಸಿದರು. ಸದಸ್ಯ ಶಶಿಧರ ಕುದಿಂಗಿಲ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries