ಕಾಸರಗೋಡು: ವಿವಿಧ ಪ್ರಕರಣಗಳಲ್ಲಿ ಶಾಮೀಲಾಗಿರುವುದಲ್ಲದೆ, ನಾಗರಿಕರಲ್ಲಿ ಭೀತಿಯವಾತಾವರಣ ಸೃಷ್ಟಿಗೆ ಕಾರಣನಾಗಿದ್ದ ಕುಖ್ಯಾತ ಕ್ರಿಮಿನಲ್, ಉಪ್ಪಳ ನಿವಾಸಿ ರಾವುಫ್ ಯಾನೆ ಮೀಸೆ ರಾವುಫ್ ಎಂಬಾತನನ್ನು ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠರ ಆಶ್ರಯದಲ್ಲಿರುವ ವಿಶೇಷ ತನಿಖಾ ದಳ ಮತ್ತು ಕುಂಬಳೆ ಠಾಣಾ ಪೆÇಲೀಸರು ನಡೆಸಿದ ಸಂಯುಕ್ತ ಕಾರ್ಯಾಚರಣೆಯಿಂದ ಆರೋಪಿಯನ್ನು ಮುಂಬ್ಯಿಯಿಂದ ಬಂಧಿಸಿದ್ದಾರೆ.
ಗ್ಯಾರೇಜಿಗೆ ಬೆಂಕಿಹಚ್ಚಿದ ಪ್ರಕರಣ, ಖಡ್ಗ ಬೀಸಿ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿರುವುದು, ನಾಗರಿಕರಿಗೆ ಇರಿದು ಗಾಗೊಳಿಸಿದ ಸೇರಿದಂತೆ 20ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಈತ ಆರೋಪಿಯಾಗಿದ್ದಾನೆ.
ಊರಲ್ಲಿ ಹಿಂಸಾಚಾರ ಸೇರಿದಂತೆ ವಿವಿಧ ಸಮಾಜಬಾಹಿರ ಕೃತ್ಯಗಳಲ್ಲಿ ಶಾಮೀಲಾಗಿ, ನಾಗರಿಕರನ್ನು ಭಯಭೀತಗೊಳಿಸಿ ಬಳಿಕ ತಲೆಮರೆಸಿಕೊಳ್ಳುವುದು ಈತನ ಹವ್ಯಸವಾಗಿತ್ತು.
ಪೆರ್ಮುದೆಯಲ್ಲಿ ಗ್ಯಾರೇಜೊಂದಕ್ಕೆ ಕಿಚ್ಚಿಟ್ಟು ಹೊತ್ತಿಸಿದ ಪ್ರಕರಣ, ಮಾರಕಾಯುಧಗಳಿಂದ ಜನರಿಗೆ ಆಕ್ರಮಣ ನಡೆಸಿದ ಪ್ರಕರಣಗಳಲ್ಲಿ ಈತನಿಗಾಗಿ ಪೆÇಲೀಸರು ಹುಡುಕಾಟ ನಡೆಸುತ್ತಿರುವ ಮಧ್ಯೆ ವಿಶೇಷ ತಂಡ ಈತನನ್ನುಬಂಧಿಸಿದೆ.
ಆರೋಪಿಯ ಪತ್ತೆಗಾಗಿ ಮುಂಬಯಿಯ ಶಂಕಿತ ಸ್ಥಳಗಳಲ್ಲಿ ನೂರಕ್ಕೂ ಅಧಿಕ ಸಿಸಿಟಿವಿ ತಪಾಸಣೆ ನಡೆಸಿರುವುದಲ್ಲದೇ ಸೈಬರ್ ಸೆಲ್ ನೆರವನ್ನೂ ಪಡೆಯಲಾಗಿತ್ತು.

