ಕಾಸರಗೋಡು : ಬೇಡಡ್ಕ ಪಾಂಡಿಕಂಡ ಎಂಬಲ್ಲಿ ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ. ಬೇಡಡ್ಕ ಸನಿಹದ ಮಣ್ಣಡ್ಕ ನಿವಾಸಿ ಮಾಧವನ್ ಅವರ ಪುತ್ರ ಅರ್ಜುನ್ (26) ನಾಪತ್ತೆಯಾದ ಯುವಕ. ಪಾಂಡಿಕ್ಕಂಡಂ ರೆಗ್ಯುಲೇಟರ್ ಕಂ ಬ್ರಿಡ್ಜ್ ಸಮೀಪ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅರ್ಜುನ್ ನಾಪತ್ತೆಯಾಗಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕುತ್ತಿಕ್ಕೋಲಿನ ಅಗ್ನಿಶಾಮಕ ದಳ ಹಾಗೂ ಕಾಸರಗೋಡಿನಿಂದ ಸ್ಕೂಬಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಪತ್ತೆ ಸಾಧ್ಯವಾಗಿರಲಿಲ್ಲ. ಅದೂರು ಪೋಲೀಸರೂ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.


