ಕುಂಬಳೆ: 68ನೇ ಕುಂಬಳೆ ಉಪ ಜಿಲ್ಲಾ ಕ್ರೀಡಾ ಕೂಟಕ್ಕೆ ಕುಂಬಳೆ ಜಿಎಸ್‍ಬಿಎಸ್‍ನಲ್ಲಿ ಚಾಲನೆ ನೀಡಲಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷ, ಕುಂಬಳೆ ಪಂಚಾಯತಿ ಅಧ್ಯಕ್ಷ ಬಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಎಸಿಪಿ ಅಚ್ಯುತ್ ಅಶೋಕ್ ವಂದನೆ ಸ್ವೀಕರಿಸಿದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಉಪಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಅಶೋಕ್ ಧ್ವಜಾರೋಹಣಗೈದರು. ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಕುಂಬಳೆ ಸಿಐ ಅನೂಪ್ ಕೃಷ್ಣ, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಎ.ಕೆ. ಆರೀಫ್, ಎಂ.ಪಿ. ಖಾಲಿದ್, ಮಂಜುನಾಥ ಆಳ್ವ, ಇನಾಸ್ ಫವಾಸ್, ಬ್ಲಾಕ್ ಪಂ. ಸದಸ್ಯರಾದ ಪೃಥ್ವಿರಾಜ್ ಶೆಟ್ಟಿ, ಸೋಯಾ ಲತೀಫ್, ರಮೇಶ್ ಭಟ್, ಎಚ್.ಎಂ. ವಿಜಯ ಕುಮಾರ್ ಮಾತನಾಡಿದರು.

.jpg)
.jpg)
