ಉಪ್ಪಳ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಾಹಿತ್ಯ ರಸಪ್ರಶ್ನೆ ಸ್ಪರ್ಧೆ ಜರಗಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಾರಾಯಣ ದೇಲoಪಾಡಿ ಅವರು, "ಪ್ರತಿಯೊಂದು ಸ್ಪರ್ಧೆಗಳು ತನ್ನಲ್ಲಿರುವ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸುವುದರೊಂದಿಗೆ ಜ್ಞಾನದ ವೃದ್ದಿಗೆ ಸಹಕಾರಿಯಾಗುತ್ತದೆ. ಸಾಹಿತ್ಯವು ಜೀವನದಲ್ಲಿ ಸಂತೋಷ, ಹಿತವನ್ನುoಟು ಮಾಡುತ್ತದೆ. ಸಾಹಿತ್ಯದ ತಿರುಳುಗಳು ಜೀವನದಲ್ಲಿ ಹೊಸತನ್ನು ಮೂಡಿಸಲು ಪ್ರೇರಣೆ ನೀಡುತ್ತದೆ" ಎಂದು ತಿಳಿಸಿದರು.
ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಅಶೋಕ್ ಕೊಡ್ಲಮೊಗರು ಅಧ್ಯಕ್ಷತೆಯಲ್ಲಿ ಜರಗಿದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ರಾವ್ ಅವರು ಸಂಘಟನೆ ನಡೆದು ಬಂದ ಹಾದಿ ಹಾಗೂ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಕೇಂದ್ರ ಸಮಿತಿಯ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಉಪಾಧ್ಯಕ್ಷೆ ಮಾಲತಿ ಟೀಚರ್, ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಕಾರ್ಯದರ್ಶಿ ಸುನೀಲ್ ಕುಮಾರ್, ಜಯಪ್ರಸಾದ್ ಪೆರ್ಮುದೆ ಮೊದಲಾದವರು ಉಪಸ್ಥಿತರಿದ್ದರು. ಎಲ್.ಪಿ. ವಿಭಾಗದ ಸ್ಪರ್ಧೆಯಲ್ಲಿ ಐಲ ಶಾಲೆಯ ಆದೀಶ್ ಮತ್ತು ಅಬ್ದುಲ್ ಫಾಮ್ ಪ್ರಥಮ, ದ್ವಿತೀಯ ಸ್ಥಾನವನ್ನು ಸೈoಟ್ ಜೋಸೆಫ್ ಕಳಿಯೂರು ಶಾಲೆಯ ಸಂಹಿತಾ ಮತ್ತು ಧಾನ್ವಿ ಶೆಟ್ಟಿ ಹಾಗೂ ತೃತೀಯ ಸ್ಥಾನವನ್ನು ಬೆರಿಪದವು ಶಾಲೆಯ ರಾಮ್ ಕಿಶನ್ ಭಟ್ ಮತ್ತು ಖದೀಜ ಜೆಸೀನಾ ಪಡೆದುಕೊಂಡರು.
ಯು. ಪಿ ವಿಭಾಗದಲ್ಲಿ ಪ್ರಥಮ ಸ್ಥಾನ ಎಸ್ ಆರ್ ಎ ಯು ಪಿ ಶಾಲೆ ಕುಬಣೂರಿನ ರವಿಚಂದ್ರ ಮಯ್ಯ ಮತ್ತು ಶಾರ್ವರಿ ಶೆಟ್ಟಿ, ದ್ವಿತೀಯ ಸ್ಥಾನವನ್ನು ಎಚ್ ಎ ಯು ಪಿ ಶಾಲೆ ಚಿಪ್ಪಾರಿನ ಆಧ್ಯತ ಮತ್ತು ರಫಾ ಫಾತಿಮಾ, ತೃತೀಯ ಸ್ಥಾನವನ್ನು ಸೈoಟ್ ಜೋಸೆಫ್ ಶಾಲೆ ಕಳಿಯೂರಿನ ಧೇಯ ಮತ್ತು ನಜ್ಲಿ ಫಾತಿಮ ಪಡೆದುಕೊಂಡರು.
ಹೈಸ್ಕೂಲ್ ವಿಭಾಗದಲ್ಲಿ ಕುರುಡಪದವು ಶಾಲೆಯ ಸಮೀಕ್ಷಾ ಮತ್ತು ಜನ್ಯಶ್ರೀ ಪ್ರಥಮ, ದ್ವಿತೀಯ ಸ್ಥಾನವನ್ನು ಕುಂಜತ್ತೂರು ಶಾಲೆಯ ಜಂಶೀರ ಹಾಗೂ ತೃತೀಯ ಸ್ಥಾನವನ್ನು ಮೀಯಪದವು ಶಾಲೆಯ ತನುಷ್ ಮತ್ತು ಶಾರ್ವಿ ಪಡೆದುಕೊಂಡರು.
ಹೈಯರ್ ಸೆಕಂಡರಿ ವಿಭಾಗದಲ್ಲಿ ಧರ್ಮತಡ್ಕ ಶಾಲೆಯ ಖದೀಜ ಸಫಾ ಪ್ರಥಮ, ಪೈವಳಿಕೆ ನಗರ ಶಾಲೆಯ ಖುಷಿ ಮತ್ತು ಕಾವ್ಯಶ್ರೀ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಬೇಕೂರು ಶಾಲೆಯ ಪಯಸ್ವಿನಿ ಮತ್ತು ಅನ್ವಿತಾ ಪಡೆದುಕೊಂಡರು.
ಬಹುಮಾನಿತರ ಪಟ್ಟಿಯನ್ನು ಜೊತೆಕಾರ್ಯದರ್ಶಿ ದೇವಾನಂದ ಮಜಿಬೈಲ್ ವಾಚಿಸಿದರು. ಕೋಶಾಧಿಕಾರಿ ಕಿಶೋರ್ ಕುಮಾರ್ ಸ್ವಾಗತಿಸಿ, ವಸಂತ ಮಾಸ್ತರ್ ಮೂಡಂಬೈಲ್ ವಂದಿಸಿದರು. ಕೇಂದ್ರ ಸಮಿತಿಯ ಸದಸ್ಯ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
