ಕಾಸರಗೋಡು: ಜಿಲ್ಲೆಯ ಪರವನಡ್ಕದ ಸ್ನೇಹಾಲಯದಲ್ಲಿ 'ಸ್ನೇಹ ಸಾಂತ್ವನ'ಕಾರ್ಯಕ್ರಮ ಆಯೋಜಿಸಲಾಯಿತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್‍ರಾಜ್ ಸಮಾರಂಭ ಉದ್ಘಾಟಿಸಿದರು. ವ್ಯಾಪಾರಿ ಸಮಿತಿ ಮಹಿಳಾ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮರುನ್ನಿಸಾ ಕಡವತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಕಾರ್ಯಕರ್ತೆ ಸುಹರಾ ಅಶ್ರಫ್ ಮತ್ತು ವ್ಯಾಪಾರಿ ವ್ಯವಸಾಯಿ ಸಂಘದ ಮಹಿಳಾ ವಿಭಾಗದ ಜಿಲ್ಲಾ ಉಪಾಧ್ಯಕ್ಷೆ ಸುಚಿತ್ರಾ ಪಿಳ್ಳೆ ಉಪಸ್ಥಿತರಿದ್ದರು.
ಸ್ನೇಹಾಲಯದ ಅಧೀಕ್ಷಕ ಎಸ್.ಎಸ್. ಅರುಣ್ ಸ್ವಾಗತಿಸಿದರು. ಮೇಟ್ರನ್ ಸುನಿತಾ ವಂದಿಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಪರವನಡ್ಕ ಸ್ನೇಹಾಳಯ ನಿವಾಸಿಗಳಿಗೆ ಸಿಹಿ ವಿತರಿಸಲಾಯಿತು.

