ಕಾಸರಗೋಡು: ನಗರದ ಪಾಂಗೋಡು ದುರ್ಗಾನಗರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ-ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ನವರಾತ್ರಿ ಮಹೋತ್ಸವ ಅ.11ರಿಂದ 20ರವರೆಗೆ ವಿವಿಧ ಧಾರ್ಮಿಕ, ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಅ.11ರಂದು ಬೆಳಗ್ಗೆ 7ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಣಹೋಮ, 8ಕ್ಕೆ ಚಂಡಿಕಾಹೋಮ ನಡೆಯುವುದು.
11ರಿಂದ ವಿವಿಧ ತಂಡಗಳಿಂದ ಭಜನೆ, ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾಪೂಜೆ, ಮಹಾತಾಯಿಯ ದರ್ಶನ ಸೇವೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಭಜನಾ ಸೇವೆ, ಮಧ್ಯಾಃನ ಮತ್ತು ರಾತ್ರಿ ಮಹಾಪೂಜೆ ನಡೆಯುವುದು. ಅ.18ರಂದು ದಸರಾ ಕವಿ ಸಮ್ಮೇಳನ, ಸಾಂಸ್ಕೃತಿಕ ವೈಭವ ನಡೆಯುವುದು. ಅಮದು ಬೆಳಗ್ಗೆ ಚಂಡಿಕಾಹೋಮ ರಾತ್ರಿ 8ಕ್ಕೆ ಶ್ರೀ ಗುರುರಾಜ್ ಕಾಸರಗೋಡು ಅವರ ಸಾರಥ್ಯದ ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ 'ಸಾಂಸ್ಕೃತಿಕ ಕಲಾ ವೈಭವ' ಕಲಾವಿದರ ಕಲರವ ಕಾರ್ಯಕ್ರಮ ನಡೆಯಲಿದೆ. ಅ.19ರಂದು ದುರ್ಗಾನಮಸ್ಕಾರ, ಸಂಗೀತ ರಸಮಂಜರಿ, ಅ.20ರಂದು ವಿದ್ಯಾರಂಭ ನಡೆಯುವುದು. ಬೆಳಗ್ಗೆ 10ಕ್ಕೆ ಗ್ರಂಥಪೂಜೆ ಹಾಗೂ ವಿದ್ಯಾರಂಭ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಹತ್ತು ದಿನಗಳ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.


