HEALTH TIPS

ಹೌದಿಗಳ ವಿರುದ್ಧ ಬೃಹತ್ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ಯಮನ್ ಅಧ್ಯಕ್ಷ

ಸನಾ: ಹೌದಿಗಳ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ, ಅವರ ವಿರುದ್ಧ ಬೃಹತ್ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಯಮನ್‍ನ ಸೌದಿ ಬೆಂಬಲಿತ ಸರಕಾರದ ನಾಯಕರು ರವಿವಾರ ಘೋಷಿಸಿದ್ದಾರೆ.


ಗಣರಾಜ್ಯದ ಬಾಕಿ ಉಳಿದಿರುವ ಪ್ರದೇಶಗಳನ್ನು ಮರಳಿ ವಶಪಡಿಸಿಕೊಳ್ಳಲು ಮತ್ತು ಇಡೀ ರಾಷ್ಟ್ರದಾದ್ಯಂತ ಸರಕಾರದ ಹಾಗೂ ಅದರ ಸಂಸ್ಥೆಗಳ ಅಧಿಕಾರವನ್ನು ವಿಸ್ತರಿಸಲು ಮಿಲಿಟರಿ ಕಾರ್ಯಾಚರಣೆಗಳ ಚಾಲನೆಯನ್ನು ಘೋಷಿಸುತ್ತಿದ್ದೇನೆ' ಎಂದು ಯಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಸ್ಥಳೀಯ ಟಿವಿ ವಾಹಿನಿಯಲ್ಲಿ ಪ್ರಸಾರವಾದ ಭಾಷಣದಲ್ಲಿ ತಿಳಿಸಿದ್ದಾರೆ. 

ಸೌದಿ ಅರೇಬಿಯಾ ಮತ್ತು ಅದರ ಯಮನ್ ಮಿತ್ರಪಡೆಗಳು ಹೌದಿಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿವೆ. ಸೌದಿಗಳು ವೈಮಾನಿಕ ದಾಳಿಯ ನೇತೃತ್ವ ವಹಿಸಿದರೆ, ಯಮನ್ ಪಡೆಗಳು ನೆಲದ ಮೇಲೆ ಹೋರಾಡಲಿವೆ ಎಂದು ಪ್ರಾದೇಶಿಕ ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ. 





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries