HEALTH TIPS

ಲೈಂಗಿಕ ಹಿಂಸಾಚಾರ: ಸಂತ್ರಸ್ತೆಯರ ಹಾಜರಿ ಖಾತರಿಪಡಿಸಲು ಸಿಬಿಐಗೆ ಸುಪ್ರೀಂ ಸೂಚನೆ

ನವದೆಹಲಿ: ಮಣಿಪುರದಲ್ಲಿ 2023ರಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದ ಸಂದರ್ಭದಲ್ಲಿ ನಡೆದಿದ್ದ ಲೈಂಗಿಕ ಹಿಂಸಾಚಾರ ಪ್ರಕರಣದ ಇಬ್ಬರು ಸಂತ್ರಸ್ತೆಯರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿ, ಸಾಕ್ಷ್ಯ ನುಡಿಯುವುದನ್ನು ಖಾತರಿಪಡಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶಿಸಿದೆ. 


ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ರದ್ದುಪಡಿಸಬೇಕೆಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು,'ಸಂತ್ರಸ್ತೆಯರು ನಿಗದಿಪಡಿಸಿದ ದಿನಗಳಂದೇ ನ್ಯಾಯಾಲಯಕ್ಕೆ ಹಾಜರಾಗಿ, ವಿಚಾರಣೆಯಲ್ಲಿ ಭಾಗಿಯಾಗುವುದನ್ನು ಖಾತರಿಪಡಿಸಿಕೊಳ್ಳಿ' ಎಂದು ನಿರ್ದೇಶನ ನೀಡಿತು.

'ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದರಿಂದ ಸಾಕ್ಷಿಗಳು ಮುಕ್ತವಾಗಿ ಸಾಕ್ಷ್ಯ ನುಡಿಯುವುದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ' ಎಂದು ಸಿಬಿಐ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಡಿ.ಪಿ. ಸಿಂಗ್‌ ಆಕ್ಷೇಪಿಸಿದರು.

ಆಗ, ಒಬ್ಬ ಆರೋಪಿ ಪರ ವಕೀಲ ಶಾದಾನ್‌ ಪರಾಸತ್ ಅವರು, 'ಪ್ರಕರಣದ ವಿಚಾರಣೆಯು ನಿರೀಕ್ಷಿತ ವೇಗದಲ್ಲಿ ನಡೆಯುವಂತೆ ಸಿಬಿಐ ಕಾಳ ವಹಿಸಿಲ್ಲ. 30 ಸಾಕ್ಷಿಗಳಿದ್ದು, ವಿಚಾರಣೆ ನಿಧಾನವಾಗಿ ಸಾಗುತ್ತಿದೆ' ಎಂದರು.

'ಸಂತ್ರಸ್ತೆಯರು ಏಕೆ ವಿಚಾರಣೆಗೆ ಲಭ್ಯವಾಗಲಿಲ್ಲ' ಎಂದು ನ್ಯಾಯಮೂರ್ತಿ ಬಾಗ್ಚಿ ಪ್ರಶ್ನಿಸಿದರು. 'ಹಿಂದಿನ ವಿಚಾರಣೆಯು ರಜಾ ದಿನದಂದು ನಿಗದಿಯಾಗಿತ್ತು. ಒಬ್ಬ ಸಂತ್ರಸ್ತೆ ಡೆಂಗಿ ಜ್ವರದಿಂದ ಬಳಲುತ್ತಿದ್ದ ಕಾರಣದಿಂದ ವಿಚಾರಣೆ ಹಾಜರಾಗಿಲ್ಲ' ಎಂದು ಸಂತ್ರಸ್ತೆಯರ ಪರ ವಕೀಲ ನಿಜಾಮ್‌ ಪಾಶಾ ತಿಳಿಸಿದರು.

'ಸಾಕ್ಷಿಗಳಿಗೆ ರಕ್ಷಣೆ ನೀಡುವುದು ನಿಮ್ಮ ಹೊಣೆಗಾರಿಕೆ. ನಿಗದಿಯಂತೆ ಅಕ್ಟೋಬರ್‌ 7, 9 ಮತ್ತು 28ರಂದು ಇಬ್ಬರೂ ಸಂತ್ರಸ್ತೆಯರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿಯಬೇಕು. ಮುಂದಿನ ವಿಚಾರಣೆ ವೇಳೆ ಒಬ್ಬ ಸಂತ್ರಸ್ತೆಯಾದರೂ ಹಾಜರಾಗಿ, ಹೇಳಿಕೆ ದಾಖಲಿಸುವುದನ್ನು ಖಾತರಿಪಡಿಸಿಕೊಳ್ಳಿ' ಎಂದು ನಿರ್ದೇಶನ ನೀಡಿದ ನ್ಯಾಯಪೀಠ, 'ಆರೋಪಿಗಳು ಜಾಮೀನಿನ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು' ಎಂದಿತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries