ಕಾಸರಗೋಡು: ರೈಲುಗಾಡಿಯಲ್ಲಿ ಮುಂಬೈಯಿಂದ ಎಂಡಿಎಂಎ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಲ್ಪಾಡಿ ಪ್ರತಾಪನಗರ ಸೋಂಕಾಲ್ ನಿವಾಸಿ ಪಿ.ಎಚ್. ಅಹಮ್ಮದ್ ರುಕ್ಮಾದ್ (33) ಮತ್ತು ಅಬ್ದುಲ್ ಹಮೀದ್ (30)ಎಂಬವರನ್ನು ನೀಲೇಶ್ವರ ರೈಲ್ವೆ ನಿಲ್ದಾಣದಿಂದ ಬಂಧಿಸಿದ್ದಾರೆ.
ನೀಲೇಶ್ವರ ಪೆÇಲೀಸ್ ಠಾಣೆಯ ಎಸ್.ಐ ಸಿ.ಎಂ. ಸುಬಿನ್‍ರ ನೇತೃತ್ವದ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇವರಿಬ್ಬರು ಮಂಗಳ ಎಕ್ಸ್‍ಪ್ರೆಸ್ ರೈಲಿನಲ್ಲಿ ಮುಂಬೈಯಿಂದ ಬಂದು ನೀಲೇಶ್ವರ ರೈಲು ನಿಲ್ದಾಣದಲ್ಲಿ ಇಳಿದ ನಂತರ ಸನಿಹದ ಕಾಂಕ್ರೀಟ್ ರಸ್ತೆ ಮೂಲಕ ನಡೆದು ಹೋಗುತ್ತಿದ್ದ ವೇಳೆ ಪೆÇಲೀಸರು ಅವರನ್ನು ತಪಾಸಣೆಗೊಳಪಡಿಸಿದಾಗ ಎಂಡಿಎಂಎ ಪತ್ತೆಯಾಗಿದೆ. ಈ ಮಾದಕ ವಸ್ತುವನ್ನು ಪಂಜಾಬ್‍ನಿಂದ ತರುತ್ತಿದ್ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನೇತೃತ್ವದ ಡಾನ್ಸಾಫ್ ತಂಡದ ಸಹಾಯದೊಂದಿಗೆ ನೀಲೇಶ್ವರ ಠಾಣೆ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದಾರೆ.


