HEALTH TIPS

ವೈದ್ಯ, ಇಂಜಿನಿಯರ್ ಸೋಗಿನಲ್ಲಿ ಯುವತಿಯರ ವಿವಾಹವಾಗಿ ವಂಚನೆ-ಆರೋಪಿ ಬಂಧನ- ಮಂಜೇಶ್ವರದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಿಂದ ವಂಚನೆ ಬಹಿರಂಗ

ಮಂಜೇಶ್ವರ: ವೈದ್ಯ ಹಾಗೂ ಇಂಜಿನಿಯರ್ ಸೋಗಿನಲ್ಲಿ ಹಲವು ಮಂದಿ ಯುವತಿಯರಿಗೆ ವಿವಾಹ ಭರವಸೆಯೊಡ್ಡಿ ಅವರಿಂದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ ಯುವಕನನ್ನು ಮಂಜೇಶ್ವರ ಚೇರ್ತಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ಪೆÇಲೀಸರು ದಾಖಲಿಸಿಕೊಂಡ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ವಯನಾಡ್ ಮಾನಂತವಾಡಿ ವೆಳ್ಳ ಚೆನ್ನಿಕರ ವೀಟಿಲ್ ಬಿಜು ಆಂಟನಿ (45)ಬಂಧಿತ.ಮಾನಂದವಾಡಿ ಸುಲ್ತಾನ್‍ಬತ್ತೇರಿ ನಿವಾಸಿಯಾಗಿರುವ ಪತ್ನಿ, ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದ ವೇಳೆ ಈತನನ್ನು ಬಂಧಿಸಲಾಗಿದೆ.

ತಾನು ವೈದ್ಯನೆಂದು ತಿಳಿಸಿ ತಳಿಪರಂಬ ನಿವಾಸಿಯಾದ ಯುವತಿಯನ್ನು ಮೋಸದಿಂದ ಮಂಜೇಶ್ವರದ ವಸತಿಗೃಹವೊಂದಕ್ಕೆ ಕರೆತಂದು ಅಲ್ಲಿ ಆಕೆಗೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಬಿಜು ಆಂಟನಿ ವಿರುದ್ಧ ಮಂಜೇಶ್ವರ ಠಾಣೆ ಪೆÇಲೀಸರು ದಾಖಲಿಸಿಕೊಂಡಿದ್ದ ಕೇಸಿಗೆ ಸಂಬಂಧಿಸಿ ಈತನನ್ನುಬಂಧಿಸಿದಾಗ ಈತನ ಅನಧಿಕೃತ ವಿವಾಹ ಹಾಗೂ ವಂಚನಾ ಪ್ರಕರಣ ಬಯಲಾಗಿದೆ. 2020ರಲ್ಲಿ ಚೇರ್ತಲ ವಯಲಾರ್‍ನ ರಮ್ಯಾ ಎಂಬಾಕೆಯನ್ನು ರಾಜೇಶ್ ಎಂಬ ಹೆಸರಿನೊಂದಿಗೆ ಪರಿಚಯಮಾಡಿಕೊಮಡಿದ್ದ ಆಂಟನಿ ಈಕೆಯನ್ನು ಮದುವೆಯಾಘಿ ಕೆಲವೇ ದಿವಸಗಳಲ್ಲಿ ಆಕೆಯ 30ಸಾವಿರ ರೂ.ನಗದು ಹಾಗೂ 7ಪವನು ಚಿನ್ನಾಭರಣ ಲಪಟಾಯಿಸಿ ಪರಾರಿಯಾಗಿದ್ದನು. ಇದೇ ರೀತಿ ಬೇರೆ ಬೇರೆ ಹೆಸರಿನಿಂದ ಯುವತಿಯರನ್ನು ವಂಚಿಸಿದ ಪ್ರಕರಣ ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries