HEALTH TIPS

ಸೊಮಾಲಿಯಾ | ಕಡಲ್ಗಳ್ಳರು ಅಪಹರಿಸಿದ್ದ ನೌಕೆಯಲ್ಲಿದ್ದ ಭಾರತೀಯ ಸೇರಿದಂತೆ ಐವರು ಸಿಬ್ಬಂದಿ ಮೃತ್ಯು: ವರದಿ

ಮೊಗದಿಶು: ಸೊಮಾಲಿಯಾದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಇಂಧನ ಟ್ಯಾಂಕರ್ ನೌಕೆಯಲ್ಲಿದ್ದ ಭಾರತೀಯ ನಾವಿಕ ಸೇರಿದಂತೆ ಐದು ಜನ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪಲಾವು ದೇಶದ ಧ್ವಜ ಹೊಂದಿದ್ದ 18,500 ಬ್ಯಾರೆಲ್ ಇಂಧನವನ್ನು ಹೊತ್ತೊಯ್ಯುತ್ತಿದ್ದ `ಎಂಟಿ ಹಾನರ್' ನೌಕೆಯು ಸೋಮಾಲಿಯಾದ ರಾಜಧಾನಿ ಮೊಗದಿಶುವಿನತ್ತ ಸಾಗುತ್ತಿದ್ದಾಗ ಎಪ್ರಿಲ್‍ನಲ್ಲಿ ಕಡಲ್ಗಳ್ಳರು ಅಪಹರಿಸಿದ್ದು ಸೊಮಾಲಿಯಾದ ಪುಂಟ್‍ಲ್ಯಾಂಡ್ ಕರಾವಳಿಯಲ್ಲಿ ಹಡಗನ್ನು ವಶದಲ್ಲಿಟ್ಟುಕೊಂಡಿದ್ದರು. 

ಇದರಲ್ಲಿ 10 ಪಾಕಿಸ್ತಾನಿಯರು, ನಾಲ್ವರು ಇಂಡೋನೇಷಿಯನ್ನರು, ಒಬ್ಬ ಭಾರತೀಯ, ಒಬ್ಬ ಶ್ರೀಲಂಕಾದವರು ಮತ್ತು ಒಬ್ಬ ಮ್ಯಾನ್ಮಾರ್ ಪ್ರಜೆ ಸೇರಿದಂತೆ ಸುಮಾರು 17 ಸಿಬ್ಬಂದಿಗಳಿದ್ದರು.

ಮಂಗಳವಾರ ನೌಕಾ ಕಾರ್ಯಾಚರಣೆಯನ್ನು ನಡೆಸಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ತೈಲ ಟ್ಯಾಂಕರ್ ಅನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಹಡಗು ಈಗ ಸುರಕ್ಷಿತವಾಗಿದ್ದು ಪುಂಟ್‍ಲ್ಯಾಂಡ್ ಸರಕಾರದ ನಿಯಂತ್ರಣದಲ್ಲಿದೆ. ಕಾರ್ಯಾಚರಣೆಯ ಸಮಯದಲ್ಲಿ 16 ಶಂಕಿತ ಕಡಲ್ಗಳ್ಳರನ್ನು ಬಂಧಿಸಲಾಗಿದ್ದು, ಉಳಿದ ಸದಸ್ಯರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಕಾರ್ಯಾಚರಣೆಗೂ ಮುನ್ನ ಮೂವರು ಪಾಕಿಸ್ತಾನಿಯರು, ಒಬ್ಬ ಭಾರತೀಯ ಮತ್ತು ಒಬ್ಬ ಮ್ಯಾನ್ಮಾರ್ ಪ್ರಜೆ ಕಡಲ್ಗಳ್ಳರಿಂದ ಕೊಲ್ಲಲ್ಪಟ್ಟಿದ್ದು, ಮೂವರು ಪಾಕಿಸ್ತಾನಿ ಸಿಬ್ಬಂದಿ ಮತ್ತು ಒಬ್ಬ ಭಾರತೀಯ ಪ್ರಜೆ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಡೈಲಿ ಸೋಮಾಲಿ' ವರದಿ ಮಾಡಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries