ಕುಂಬಳೆ: ಕುಂಬಳೆ ಪೋಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಬಾಡೂರಿನ ಅಮಿನ ಎಂಬಲ್ಲಿ ಕೋಳಿ ಅಂಕದಲ್ಲಿ ನಿರತವಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಡೂರುಪದವಿನ ಸತೀಶ (40), ಅಂಗಡಿಮೊಗರು ಅಮಿನ ಹೌಸ್‍ನ ಎ. ಚಂದ್ರ (47), ಕುರುಡಪದವು ಕೊಮ್ಮಂಗಳದ ಗಣೇಶ್ (35)ಬಂಧಿತರು.
ಉಳಿದವರು ಓಡಿ ಪರಾರಿಯಾಗಿದ್ದಾರೆ. ಹಿತ್ತಿಲೊಂದರಲ್ಲಿ ಕೋಳಿ ಅಂಕ ನಡೆಯುತ್ತಿರುವ ಲಭಿಸಿದ ಮಾಹಿತಿಯನ್ವಯ ಎಸ್‍ಐ ನೇತೃತ್ವದಲ್ಲಿ ಕುಂಬಳೆ ಠಾಣೆ ಎಸ್‍ಐ ಎನ್. ಅನೂಪ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳದಿಂದ ಎರಡು ಅಂಕದ ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ.

