ಕಾಸರಗೋಡು: ಸೀಮೆಎಣ್ಣೆ ಹೊಯ್ದು ಬೆಂಕಿ ಹಚ್ಚಿಕೊಂಡು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಾಪಾರಿ, ಬೋವಿಕ್ಕಾನ ಮುಂಡಕೈಯ ನಿವಾಸಿ ಬಾಲಕೃಷ್ಣನ್ (57) ಮೃತಪಟ್ಟಿದ್ದಾರೆ. ಭಾನುವಾರ ಇವರು ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸುಟ್ಟಗಾಯಗಳೊಂದಿಗೆ ಇವರನ್ನು ಪರಿಯಾರಂ ಮೇಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಘಿತ್ತು. ಚಿಕಿತ್ಸೆ ಮಧ್ಯೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಬೋವಿಕ್ಕಾನ ಸನಿಹದ ಮುಂಡಕೈ ಮಳಿಕ್ಕಲ್‍ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು.


