HEALTH TIPS

ನಾಳೆ ಮಾಜಿ ಸಚಿವ ಡಾ. ಎ. ಸುಬ್ಬರಾವ್ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ವಿತರಣೆ

ಕಾಸರಗೋಡು: ಕೇರಳದ ಮಾಜಿ ಸಚಿವ, ಕನ್ನಡಿಗ ಹಿರಿಯ ಕಮ್ಯೂನಿಸ್ಟ್ ಮುಖಂಡ ದಿ.ಡಾ. ಎ. ಸುಬ್ಬರಾವ್ ಸಂಸ್ಮರಣೆ ಹಾಗೂ ಯುವಕಲಾಸಾಹಿತಿ ಡಾ. ಎ. ಸುಬ್ಬರಾವ್ ಸ್ಮಾರಕ ಸಾಂಸ್ಕøತಿಕ ಪುರಸ್ಕಾರ ಪ್ರದಾನ ಸಮಾರಂಭ ಅ. 3ರಂದು ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ. ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಕೇರಳ ವಿಧಾನಸಭಾ ಅಧ್ಯಕ್ಷ ತಿರುವಾಂಜೂರು ರಾಧಾಕೃಷ್ಣನ್ ಸಮರಂಭ ಉದ್ಘಾಟಿಸುವರು ಎಂದು ಸ್ವಗತ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಇ. ಚಂದ್ರಶೇಖರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಿರಿಯ ಸಾಹಿತಿ, ಪರಿಸರ ಹೋರಾಟಗಾರ ನಾರಾಯಣನ್ ಪೆರಿಯ ಅವರಿಗೆ ಪುರಸ್ಕರ ನೀಡಿ ಗೌರವಿಸಲಾಗುವುದು. ಮಾಜಿ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಯುವಕಲಾ ಸಾಹಿತಿ ರಾಜ್ಯ ಸಮಿತಿ ಕಾರ್ಯದರ್ಶಿ ಜಯನ್ ನೀಲೇಶ್ವರ ಪ್ರಶಸ್ತಿ ಪುರಸ್ಕøತರ ಬಗ್ಗೆ ಮಾತನಾಡುವರು. ಮಾಜಿ ಸಂಸದ, ಸಿಪಿಐ ಮುಖಂಡ ಪನ್ಯನ್ ರವೀಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಡಾ. ಅಂಬಿಕಾಸುತನ್ ಮಾಙËಡ್ ಸ್ಮರಣಸಂಚಿಕೆ ಬಿಡುಗಡೆಗೊಳಿಸುವರು. ಕಾಸರಗೋಡು ನಗರಸಭಾಧ್ಯಕ್ಷೆ ಶಾಹಿನಾಸಲೀಂ, ಜಿಲ್ಲೆಯ ಶಾಸಕರು ಮೊದಲಾದವರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲ ರಾಧಾಕೃಷ್ಣನ್ ಪೆರುಂಬಳ, ರಾಘವನ್ ಮಾಣಿಯಾಟ್, ಕೆ. ರವೀಂದ್ರನ್, ಟಿ. ಕೃಷ್ಣನ್, ಸಿಜು ಉಣ್ಣಿತ್ತಾನ್ ಉಪಸ್ಥಿತರಿದ್ದರು.



 

 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries