ಕಾಸರಗೋಡು: ನಗರದ ಬಿ.ಇ.ಎಂ ಪ್ರೌಢಶಾಲೆಯ 2026-27 ನೇ ವರ್ಷದ ಶಾಲಾ ಕಲೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಕೆ.ಆರ್. ನಗರ ಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಜಂಟಿಯಾಗಿ ದೀಪ ಪ್ರಜ್ವಲಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ, ಎಂ.ಪಿ.ಟಿ.ಎ ಅಧ್ಯಕ್ಷೆ ಚೇತನ, ಪಿಟಿಎ ಉಪಾಧ್ಯಕ್ಷ ಕಿಶೋರ್, ಎಸ್.ವಿ.ಟಿ. ಕಲೋತ್ಸವ ಕನ್ವೀನರ್ ಸ್ಮಿತಾ ಸಿರಿಯಾಕ್, ಯಶವಂತ ಮಾಸ್ಟರ್, ರೋಹಿತಾಕ್ಷಿ ಟೀಚರ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಹಾಡಿದರು. ಬಾಲಕೃಷ್ಣ ಮಾಸ್ಟರ್ ಸ್ವಾಗತಿಸಿದರು. ಶರ್ಲಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸ್ಟಾಫ್ ಸೆಕ್ರೆಟರಿ ವಿಶಾಲಾಕ್ಷಿ ಬಿ.ವಿ ವಂದಿಸಿದರು.


