ಕಾಸರಗೋಡು: ಶುಚಿತ್ವ ವಾರಾಚರಣೆ ಅಂಗವಾಗಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ವಠಾರದಲ್ಲಿ ಶುಚೀಕರಣ ಕಾರ್ಯ ನಡೆಸಲಾಯಿತು. ಸೇವಾಭಾರತಿ ಕಾಸರಗೋಡು ನಗರ ಸಮಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಸರಗೋಡು ನಗರ ಸಭಾ ಸದಸ್ಯ ಕೆ.ಎನ್.ರಾಮಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ಶುಚೀಕರಣಕಾರ್ಯ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸೇವಾಭಾರತಿ ಪ್ರಮುಖರಾದ ಸುಜಿತ್ ಪಿಲಿಕುಂಜೆ, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಗಣೇಶ್ ಬೀರಂತಬೈಲ್, ರವಿ ಕೇಸರಿ, ಸೌಮ್ಯ ಹಾಗೂ ಸದಸ್ಯರು ಶುಚೀಕರಣದಲ್ಲಿ ಸಹಕರಿಸಿದರು.

