HEALTH TIPS

ಯುದ್ಧ ವಿಮಾನದಲ್ಲಿ ಏಕಾಂಗಿ ಹಾರಾಟ: ಇತಿಹಾಸ ಬರೆದ ಥಾಯ್ಲೆಂಡ್ ರಾಣಿ

ಥಾಯ್ಲೆಂಡ್‌: ಥಾಯ್ಲೆಂಡ್‌ನ ರಾಣಿ ಸುತಿದಾ ಅವರು ಯುದ್ಧ ವಿಮಾನದಲ್ಲಿ ಏಕಾಂಗಿಯಾಗಿ ಹಾರಾಟ ನಡೆಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಅ.8ರಂದು ದಕ್ಷಿಣ ಥಾಯ್ಲೆಂಡ್‌ನ ಸುರತ್ ಥಾನಿ ಪ್ರಾಂತ್ಯದಲ್ಲಿರುವ 'ವಿಂಗ್ 7' ವಾಯು ನೆಲೆಯಿಂದ ಸ್ವೀಡನ್ ನಿರ್ಮಿತ ''JAS 39C ಗ್ರಿಪನ್' ಯುದ್ಧ ವಿಮಾನದಲ್ಲಿ 41 ನಿಮಿಷ ಏಕಾಂಗಿಯಾಗಿ ಹಾರಾಟ ನಡೆಸಿದ್ದಾರೆ. 


ಈ ಮೂಲಕ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಚಲಾಯಿಸಿದ ಜಗತ್ತಿನ ಮೊದಲ ರಾಣಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಪತಿಯ ಮೆಚ್ಚುಗೆ

ಯುದ್ಧ ವಿಮಾನವನ್ನು ಯಶಸ್ಸಿಯಾಗಿ ಹಾರಾಟ ನಡೆಸಿ ಬಂದ ರಾಣಿಗೆ, ಪತಿ, ಥಾಯ್ಲೆಂಡ್‌ ರಾಜ ವಜಿರಾಲೊಂಗ್‌ಕೋರ್ನ್ ಪುಷ್ಪಗುಚ್ಛ ಹಾಗೂ 'ಗ್ರಿಪನ್ ಆರ್ಡರ್ ಗೋಲ್ಡನ್ ಪ್ಯಾಚ್' ನೀಡಿ ಗೌರವಿಸಿದ್ದಾರೆ.

1,188 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿದ ಅನುಭವ

2010ರಿಂದಲೇ ರಾಣಿ ಸುತಿದಾ ಅವರು ವಿಮಾನ ಹಾರಾಟ ಆರಂಭಿಸಿದ್ದು, ಇಲ್ಲಿಯವರೆಗೆ ಒಟ್ಟು 1,188 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿ ಅನುಭವ ಹೊಂದಿದ್ದಾರೆ.

ಇವರು, ಸಿಸ್ನಾ (Cessna T-41), ಪಿಲಾಟಸ್ (Pilatus PC-9), ಪೈಪರ್ (Piper PA-34), ಬೋಯಿಂಗ್ 737 ಸೇರಿದಂತೆ ಹಲವು ಮಾದರಿಯ ಸೇನಾ ಮತ್ತು ಪ್ರಯಾಣಿಕರ ವಿಮಾನಗಳನ್ನು ಚಲಾಯಿಸಿದ್ದಾರೆ.

ರಾಜ ವಜಿರಾಲೊಂಗ್‌ಕೋರ್ನ್ ಅವರೊಂದಿಗೆ ಪ್ರಮುಖ ಅಧಿಕೃತ ಪ್ರವಾಸಗಳಲ್ಲಿ ರಾಣಿ ಸುತಿದಾ ಅವರು ಸಹ-ಪೈಲಟ್ ಆಗಿಯೂ ಕೆಲಸ ಮಾಡಿದ್ದಾರೆ.

ರಾಣಿ ಸುತಿದಾ ಅವರು ವಿಮಾನ ಹಾರಾಟ ನಡೆಸಿರುವ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅವರ ಸಾಹಸಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಯಾರು ಈ ರಾಣಿ ಸುತಿದಾ?

ಥಾಯ್ಲೆಂಡ್ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಹಿತಿಯ ಪ್ರಕಾರ, 1978ರ ಜೂನ್ 3ರಂದು ಸಾಂಗ್ಖ್ಲಾ ಪ್ರಾಂತ್ಯದ ಹಾಟ್ ಯೈ ಜಿಲ್ಲೆಯಲ್ಲಿ ಜನಿಸಿದ ಸುತಿದಾ, ಬ್ಯಾಂಕಾಕ್‌ನಲ್ಲಿ ಸಂವಹನ ಕಲೆಗಳಲ್ಲಿ ಪದವಿ ಪಡೆದಿದ್ದಾರೆ.

ರಾಜಮನೆತನಕ್ಕೆ ಸೇರುವ ಮೊದಲು ಸುತಿದಾ ಅವರು, 2003ರಿಂದ 2008ರವರೆಗೆ 'ಥಾಯ್ ಏರ್‌ವೇಸ್'ನಲ್ಲಿ ವಿಮಾನ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ರಾಜಮನೆತನದ ಭದ್ರತಾಪಡೆಯಲ್ಲಿ ಸೇವೆ ಸಲ್ಲಿಸಿ ಕಠಿಣ ಮಿಲಿಟರಿ ತರಬೇತಿ ಪಡೆದಿದ್ದಾರೆ.

2019ರಲ್ಲಿ ಇವರು ರಾಜ ವಜಿರಾಲೊಂಗ್‌ಕೋರ್ನ್ ಅವರೊಂದಿಗೆ ವಿವಾಹವಾಗಿದ್ದಾರೆ.  


🇹🇭 ‘The World’s only Pilot Queen’ – #Thailand’s Queen Suthida of Thailand passed her solo flight training with JAS 39C #Gripen. King Vajiralongkorn observed the training and congratulated her with a bouquet of flowers at Wing 7 Royal Air Force Base #SuratThani. พระปรีชาสามารถของ Show more


Thailand’s Queen Suthida yesterday flew a JAS 39 Gripen solo for the first time.












 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries