HEALTH TIPS

ಐಸ್‌ಕ್ಯೂಬ್ ನ್ಯೂಟ್ರಿನೋ ವೀಕ್ಷಣಾಲಯದ ಕೊಡುಗೆ: ಫ್ರಾನ್ಸಿಸ್ ಹಾಲ್ಜೆನ್‌ಗೆ ಭೌತಶಾಸ್ತ್ರ ನೊಬೆಲ್

ಐಸ್‌ಕ್ಯೂಬ್ ನ್ಯೂಟ್ರಿನೋ ವೀಕ್ಷಣಾಲಯಕ್ಕೆ ನೀಡಿದ ನಿರ್ಣಾಯಕ ಕೊಡುಗೆ ಹಾಗೂ ಖಗೋಳ ಭೌತಿಕ ಮೂಲದ ಅಧಿಕ ಶಕ್ತಿಯ ನ್ಯೂಟ್ರಿನೋಗಳ ಆವಿಷ್ಕಾರಕ್ಕಾಗಿ ಫ್ರಾನ್ಸಿಸ್ ಹಾಲ್ಜೆನ್ ಅವರು 2026ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 


ದಕ್ಷಿಣ ಧ್ರುವದಲ್ಲಿರುವ ಮಂಜುಗಡ್ಡೆಯನ್ನು ನ್ಯೂಟ್ರಿನೋ ಎಂದು ಕರೆಯಲಾಗುವ ಕಣಗಳನ್ನು ಪತ್ತೆಹಚ್ಚಲು ಬಳಸಬಹುದು ಎಂಬುದನ್ನು ಹಾಲ್ಜೆನ್ ಅವರು ಅರಿತುಕೊಂಡಿದ್ದರು.

ಅವರ ವೈಜ್ಞಾನಿಕ ದೃಷ್ಟಿಕೋನ ಮತ್ತು ನಾಯಕತ್ವವು ಐಸ್‌ಕ್ಯೂಬ್ ನ್ಯೂಟ್ರಿನೋ ವೀಕ್ಷಣಾಲಯದ ನಿರ್ಮಾಣಕ್ಕೆ ನಿರ್ಣಾಯಕವಾಗಿತ್ತು.

ಬೆಳಕಿನ ಸಂವೇದಕಗಳನ್ನು ಹೊಂದಿರುವ ಸುಮಾರು ಒಂದು ಘನ ಕಿಲೋಮೀಟರ್‌ ಮಂಜುಗಡ್ಡೆಯನ್ನು ಒಳಗೊಂಡಿರುವ ಐಸ್‌ಕ್ಯೂಬ್ ವೀಕ್ಷಣಾಲಯದ ಮೂಲಕ ದೂರದ ವಿಶ್ವದಲ್ಲಿ ನಡೆಯುವ ಅತ್ಯಂತ ಶಕ್ತಿಶಾಲಿ ಪ್ರಕ್ರಿಯೆಗಳಿಂದ ಹೊರಹೊಮ್ಮುವ ನ್ಯೂಟ್ರಿನೋಗಳನ್ನು ಪತ್ತೆಹಚ್ಚಲು ಸಂಶೋಧಕರಿಗೆ ಸಾಧ್ಯವಾಗಿದೆ ಎಂದು ತೀರ್ಪುಗಾರರು ತಿಳಿಸಿದ್ದಾರೆ.

ದೂರದ ಬ್ರಹ್ಮಾಂಡದಲ್ಲಿ ಹುಟ್ಟುವ ನ್ಯೂಟ್ರಿನೋಗಳನ್ನು ಐಸ್‌ಕ್ಯೂಬ್ ವೀಕ್ಷಣಾಲಯ ಪತ್ತೆಹಚ್ಚುತ್ತದೆ. ವೀಕ್ಷಣಾಲಯ ನಿರಂತರವಾಗಿ ದಾಖಲಿಸುವ ನ್ಯೂಟ್ರಿನೋ ಸಂವಹನಗಳು, ಅಧಿಕ ಶಕ್ತಿಯ ನ್ಯೂಟ್ರಿನೋಗಳನ್ನು ಸೃಷ್ಟಿಸಬಲ್ಲ ಹಿಂಸಾತ್ಮಕ ಖಗೋಳ ಪರಿಸರಗಳ ಕುರಿತು ಸಂಶೋಧಕರಿಗೆ ಹೊಸ ಮಾಹಿತಿಯನ್ನು ಒದಗಿಸುತ್ತವೆ. ಈ ಮೂಲಕ ಈವರೆಗೆ ತಿಳಿದಿರದ ಕಾಸ್ಮಿಕ್ ವಿದ್ಯಮಾನಗಳನ್ನೂ ಪತ್ತೆಹಚ್ಚಲು ಸಾಧ್ಯವಾಗಬಹುದು ಎಂದು ಪ್ರಶಸ್ತಿ ನೀಡುವ ಸಂಸ್ಥೆ ತಿಳಿಸಿದೆ.

2025ರ ಭೌತಶಾಸ್ತ್ರ ನೊಬೆಲ್:

ಜಾನ್ ಕ್ಲಾರ್ಕ್, ಮೈಕೆಲ್ ಎಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಅವರು 2025ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು 'ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಶಕ್ತಿಯ ಕ್ವಾಂಟೀಕರಣದ ಆವಿಷ್ಕಾರಕ್ಕಾಗಿ' ಪಡೆದಿದ್ದರು.

ಕ್ವಾಂಟಮ್ ಜಗತ್ತಿನ ವಿಲಕ್ಷಣ ಗುಣಲಕ್ಷಣಗಳನ್ನು ಕೈಯಲ್ಲಿ ಹಿಡಿಯುವಷ್ಟು ದೊಡ್ಡ ವ್ಯವಸ್ಥೆಯಲ್ಲಿಯೂ ಸ್ಪಷ್ಟವಾಗಿ ಪ್ರದರ್ಶಿಸಬಹುದು ಎಂಬುದನ್ನು ಹಲವು ಪ್ರಯೋಗಗಳ ಮೂಲಕ ಈ ವಿಜ್ಞಾನಿಗಳು ತೋರಿಸಿದ್ದರು ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿತ್ತು.

'ಅವರ ಸೂಪರ್ ಕಂಡಕ್ಟಿಂಗ್ ವಿದ್ಯುತ್ ವ್ಯವಸ್ಥೆಯು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ನೇರವಾಗಿ ಗೋಡೆಯ ಮೂಲಕ ಹಾದುಹೋಗುವಂತೆ ಸುರಂಗ ಮಾರ್ಗದ ಮೂಲಕ ಸಾಗಬಲ್ಲದು. ಕ್ವಾಂಟಮ್ ಮೆಕ್ಯಾನಿಕ್ಸ್ ಊಹಿಸಿದಂತೆ, ನಿರ್ದಿಷ್ಟ ಪ್ರಮಾಣದಲ್ಲಿ ಶಕ್ತಿಯನ್ನು ಹೀರಿಕೊಳ್ಳುವ ಮತ್ತು ಹೊರಸೂಸುವ ಸಾಮರ್ಥ್ಯವನ್ನೂ ಈ ವ್ಯವಸ್ಥೆ ಹೊಂದಿದೆ' ಎಂದು ಪ್ರಕಟಣೆ ತಿಳಿಸಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries