HEALTH TIPS

ಜೆರುಸಲೇಂನಲ್ಲಿರುವ ಬ್ರಿಟಿಷ್ ಕಾನ್ಸುಲೇಟ್ ಕಾರ್ಯನಿರ್ವಹಣೆ ಸ್ಥಗಿತ: ಇಸ್ರೇಲ್

ಟೆಲ್ ಅವೀವ್: ಪೂರ್ವ ಜೆರುಸಲೇಂನಲ್ಲಿರುವ ಬ್ರಿಟಿಷ್ ಕಾನ್ಸುಲೇಟ್ ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ ಹಾಗೂ ಕಾನ್ಸುಲ್ ಜನರಲ್ ಸೇರಿದಂತೆ 20 ಬ್ರಿಟಿಷ್ ರಾಯಭಾರಿಗಳು ದೇಶ ತೊರೆಯುತ್ತಿದ್ದಾರೆ ಎಂದು ಇಸ್ರೇಲ್ ಗುರುವಾರ ತಿಳಿಸಿದೆ.


ಆದರೆ ಈ ಕಟ್ಟಡವು `ಯುಕೆ ಮಿಷನ್, ಜೆರುಸಲೇಂ' ಎಂಬ ಹೆಸರಿನಲ್ಲಿ ತೆರೆದಿರುತ್ತದೆ ಎಂದು ಬ್ರಿಟನ್ ಹೇಳಿದೆ. 

ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತುಗಳೊಂದಿಗಿನ ವ್ಯಾಪಾರದ ಮೇಲೆ ಬ್ರಿಟನ್ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ನಿರ್ಬಂಧಗಳನ್ನು ಹೇರಿದ್ದವು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೆಪ್ಟೆಂಬರ್‌ನಲ್ಲಿ ಕಾನ್ಸುಲೇಟ್ ಮುಚ್ಚಲು ಆದೇಶಿಸಿದ ನಂತರ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ.

ಬ್ರಿಟನ್ ಸರಕಾರದೊಂದಿಗೆ ನಡೆಸಿದ ಮಾತುಕತೆಯ ನಂತರ ಬ್ರಿಟಿಷ್ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿತಗೊಳಿಸುವ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಹೇಳಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries