ಶಾಸಕರಿಗೆ ₹1.05 ಲಕ್ಷ, ಸಚಿವರಿಗೆ ₹1.30 ಲಕ್ಷ ವೇತನದ ಪ್ರಸ್ತಾವನೆ
ತಿರುವನಂತಪುರಂ: ಸಮರಸ ಸುದ್ದಿ ಡಾಟ್ ಕಾಮ್
ಕೇರಳದ ಶಾಸಕರು ಮತ್ತು ಸಚಿವರ ವೇತನ ಪರಿಷ್ಕರಣೆಯ ಪ್ರಸ್ತಾವನೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ. ಪ್ರಸ್ತಾವನೆಯ ಪ್ರಕಾರ ಶಾಸಕರ ಮಾಸಿಕ ವೇತನವನ್ನು ₹1.05 ಲಕ್ಷಕ್ಕೆ ಹಾಗೂ ಸಚಿವರ ವೇತನವನ್ನು ₹1.30 ಲಕ್ಷಕ್ಕೆ ಹೆಚ್ಚಿಸುವ ಕುರಿತು ಚರ್ಚೆ ನಡೆಯಲಿದೆ.
2022ರಲ್ಲೇ ವೇತನ ಪರಿಷ್ಕರಣೆಗೆ ಶಿಫಾರಸು ಸಲ್ಲಿಕೆಯಾಗಿದ್ದರೂ ಅದನ್ನು ಜಾರಿಗೆ ತರಲಾಗಿರಲಿಲ್ಲ. ಇದೀಗ ಈ ಪ್ರಸ್ತಾವನೆ ಮತ್ತೆ ಚರ್ಚೆಗೆ ಬಂದಿದ್ದು, ಸಚಿವ ಸಂಪುಟದ ನಿರ್ಧಾರ ಕುತೂಹಲ ಮೂಡಿಸಿದೆ.


