ಕಾಸರಗೋಡು: ನವರಾತ್ರಿ ಉತ್ಸವದ ನವಮಿಯಂದು ಕಾಸರಗೋಡಿನ ‘ಕೊರಕ್ಕೋಡು ಟೈಗರ್ಸ್’ ನೇತೃತ್ವದಲ್ಲಿ 22ನೇ ವರ್ಷದ ಹುಲಿವೇಷ ಕುಣಿತದ ಪೂಜಾ ಸಮಾರಂಭ ನಡೆಯಿತು.
ಧಾರ್ಮಿಕ ಮುಖಂಡ ರವೀಶ್ ತಂತ್ರಿ ಕುಂಟಾರು ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ವಿಶ್ವನಾಥ ಮಣಿಯಾಣಿ ಕೊರಕ್ಕೋಡು, ರಾಜೇಶ್ ಪ್ರಭು ಬಟ್ಟಂಪಾರೆ, ರಾಜೇಶ್ ನುಳ್ಳಿಪ್ಪಾಡಿ, ಮುರಳಿ ಮಾಸ್ಟರ್, ಹರೀಶ್ ಹಾಗೂ ನಗರಸಭಾ ಸದಸ್ಯ ಮಧುಕರ್ ಉಪಸ್ಥಿತರಿದ್ದರು.
ಗೋಕುಲ್ ಝೂಮ್ ಮತ್ತು ಪ್ರವೀಣ್ ಕೊರಕ್ಕೋಡು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.



