ಚೆನ್ನೈ (PTI): ಖ್ಯಾತ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ಅವರು ಶನಿವಾರ ರಾತ್ರಿ ಅನಾರೋಗ್ಯದಿಂದಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಭಾನುವಾರ ವಿರುಗಾಂಬಕ್ಕಂನಲ್ಲಿನ ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು.
ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಅವರ ನಿರ್ದೇಶನದ 'ದಿಕ್ಕತ್ರ ಪರ್ವತಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಂದಿದೆ. ಇದೇ ವರ್ಷ ಅವರ ಕೊನೆಯ ಸಿನಿಮಾ 'ಸಿಂಗ್ ಗೀತಂ' ಕೂಡ ತೆರೆ ಕಂಡಿತ್ತು.

