HEALTH TIPS

ಅಮೆರಿಕ ಸುಂಕವನ್ನು ಆಯುಧವಾಗಿ ಬಳಸುತ್ತಿರುವುದರಿಂದ ಮಾತುಕತೆ ಜಟಿಲ : ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಮಾತುಕತೆಗಳು ಸ್ತಬ್ಧಗೊಂಡಿದ್ದು, ಇನ್ನಷ್ಟು ರಿಯಾಯಿತಿಗಳನ್ನು ನೀಡುವುದು ಕಷ್ಟವಾಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.


ವ್ಯಾಪಾರ ಮಾತುಕತೆಗಳು ಸ್ಥಗಿತಗೊಳ್ಳಲು ಅಮೆರಿಕ ಹೆಚ್ಚೆಚ್ಚು ಸುಂಕವನ್ನು ಬಳಸುತ್ತಿರುವುದೇ ಕಾರಣ ಎಂದು ಸೀತಾರಾಮನ್ ಆರೋಪಿಸಿದರು.

ಅಮೆರಿಕವು ಸುಂಕಗಳನ್ನು ಆಯುಧವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದರು.

ಫೆಬ್ರವರಿ 2ರಂದು ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಮತ ವ್ಯಕ್ತವಾದ ನಂತರ, ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕ ಒಟ್ಟು ಶೇಕಡಾ 50 ರಿಂದ ಶೇಕಡಾ 18ಕ್ಕೆ ಇಳಿಯಬೇಕಿತ್ತು. ಶೇಕಡಾ 50 ಸುಂಕದಲ್ಲಿ, ರಶ್ಯದಿಂದ ತೈಲ ಖರೀದಿಸಿರುವುದಕ್ಕಾಗಿ ಅಮೆರಿಕವು 2025ರ ಆಗಸ್ಟ್‌ನಲ್ಲಿ ವಿಧಿಸಿದ್ದ ಶೇಕಡಾ 25 ದಂಡನಾತ್ಮಕ ಸುಂಕವೂ ಇದೆ.

ಆದರೆ, ಅಮೆರಿಕದ ಸುಪ್ರೀಂ ಕೋರ್ಟ್ ಫೆಬ್ರವರಿ 20ರಂದು ಟ್ರಂಪ್ ವಿಧಿಸಿದ್ದ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿ, ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ತೀರ್ಪು ನೀಡಿದ ನಂತರ ಅಂತಿಮ ಒಪ್ಪಂದದ ಮಾತುಕತೆಗಳು ನನೆಗುದಿಗೆ ಬಿದ್ದವು.

ಇದಕ್ಕೆ ಪ್ರತಿಯಾಗಿ, 1974ರ ವ್ಯಾಪಾರ ಕಾಯ್ದೆಯ ಅಡಿಯಲ್ಲಿ ತನಗಿರುವ ಅಧಿಕಾರವನ್ನು ಉಲ್ಲೇಖಿಸಿ, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಟ್ರಂಪ್ ತಾತ್ಕಾಲಿಕವಾಗಿ ಶೇಕಡಾ 10ರಷ್ಟು ಸುಂಕವನ್ನು ವಿಧಿಸಿದರು. ಇದು ಭಾರತ ಸೇರಿದಂತೆ ಇತರ ದೇಶಗಳೊಂದಿಗಿನ ಅಮೆರಿಕದ ವ್ಯಾಪಾರ ಒಪ್ಪಂದಗಳ ಸ್ಥಿತಿಯನ್ನು ಅನಿಶ್ಚಿತಗೊಳಿಸಿದೆ.

ಮಾತುಕತೆಗಳು ಅಂತಹ ಒಂದು ಹಂತವನ್ನು ತಲುಪಿದ್ದು, ಅಲ್ಲಿಂದಾಚೆಗೆ ಎರಡೂ ಕಡೆಯವರಿಗೆ ಹೆಚ್ಚುವರಿ ಕೊಡು-ಕೊಳ್ಳುವಿಕೆ ಅತ್ಯಂತ ಕಷ್ಟಕರ ಎಂದು ಸೀತಾರಾಮನ್ ಸೋಮವಾರ ಹೇಳಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries