ನವದೆಹಲಿ: ಭಾರತೀಯ ಯುದ್ಧ ನೌಕೆಗಳಿಗಾಗಿ ಬ್ರಹ್ಮೋಸ್ ಫಯರ್ ಕಂಟ್ರೋಲ್ ಸಿಸ್ಟಮ್‌ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಮಂಗಳವಾರ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜೊತೆಗೆ 661.5 ಕೋಟಿ ವೆಚ್ಚದ ಗುತ್ತಿಗೆಗೆ ಸಹಿ ಹಾಕಿದೆ.
ಗುತ್ತಿಗೆಗೆ ಹೊಸದಿಲ್ಲಿಯಲ್ಲಿ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್‌ರ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು.
ಭಾರತದ ಮುಂಚೂಣಿಯ ಯುದ್ಧ ನೌಕೆಗಳಲ್ಲಿ ಬ್ರಹ್ಮೋಸ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗುವುದು. ಬ್ರಹ್ಮೋಸ್ ಶಸ್ತ್ರಾಸ್ತ್ರ ವ್ಯವಸ್ಥೆಯು ಸಾಗರ ಯುದ್ಧದಲ್ಲಿ ಭಾರತೀಯ ನೌಕಾಪಡೆಯ ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಪ್ರಾಥಮಿಕ ಕ್ಷಿಪಣಿ ವ್ಯವಸ್ಥೆಯಾಗಿದೆ. ಈ ಶಸ್ತ್ರ ವ್ಯವಸ್ಥೆಯು ನೆಲ ಮತ್ತು ಸಮುದ್ರ ಎರಡರಲ್ಲೂ ಹೆಚ್ಚುವರಿ ವ್ಯಾಪ್ತಿಯಲ್ಲಿ ಇರುವ ಗುರಿಗಳನ್ನು ನಿಭಾಯಿಸುತ್ತದೆ.


