HEALTH TIPS

ಬದಿಯಡ್ಕದಲ್ಲಿ ಹಿರಿಯ ನಾಗರಿಕರ ವೇದಿಕೆಯಿಂದ ದಸರಾ ನಾಡಹಬ್ಬ ಕವಿಗೋಷ್ಠಿ- ಕವಿತೆಗಳ ಮೂಲಕ ಸಾಹಿತ್ಯ ಮತ್ತು ಸಂಸ್ಕøತಿಯ ಸಂಭ್ರಮ


ಬದಿಯಡ್ಕ
: ಕೇರಳ ಹಿರಿಯ ನಾಗರಿಕರ ವೇದಿಕೆಯ ನೇತೃತ್ವದಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಸರಾ ನಾಡಹಬ್ಬದ ಅಂಗವಾಗಿ ಕವಿಗೋಷ್ಠಿ ಭಾನುವಾರ ನಡೆಯಿತು.

ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ. ಶಂಕರ ಅವರು ದೀಪ ಬೆಳಗಿಸಿ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಹಿರಿಯ ನಾಗರಿಕರು ಸಮಾಜದ ಆಸ್ತಿ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜೀವನದ ಸಂಧ್ಯಾಕಾಲದಲ್ಲಿಯೂ ಕ್ರಿಯಾಶೀಲರಾಗಿರುವುದು ಅಭಿನಂದನೀಯ. ಇಂತಹ ಕವಿಗೋಷ್ಠಿಗಳು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪೂರಕವಾಗಿವೆ ಎಂದು ಅವರು ಹೇಳಿದರು.

ನಾಡಿನ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯವು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸದ್ಭಾವನೆಯನ್ನು ಬೆಳೆಸುತ್ತದೆ. ಕವಿತೆ ಮತ್ತು ಕವನಗಳು ಸಮಾಜದ ಹಿತಕ್ಕೆ ಪೂರಕವಾಗಿರಬೇಕು. ಕವಿಗೆ ಅಪಾರ ಜ್ಞಾನವಿರುವುದರ ಜೊತೆಗೆ ಪದಗಳನ್ನು ಅರ್ಥಪೂರ್ಣವಾಗಿ, ಛಂದೋಬದ್ಧವಾಗಿ ಮತ್ತು ಲಯಬದ್ಧವಾಗಿ ಜೋಡಿಸುವ ಸಾಮಥ್ರ್ಯವೂ ಇರಬೇಕು ಎಂದು ಅಭಿಪ್ರಾಯಪಟ್ಟರು. ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ ಗೋಳಿಯಡ್ಕ ಶುಭ ಹಾರೈಸಿದರು.

ಹಿರಿಯ ಕವಿಗಳಾದ ವೆಂಕಟ್ ಭಟ್ ಎಡನೀರು, ಬಾಲ ಮಧುರಕಾನನ, ಆನಂದ ರೈ ಅಡ್ಕಸ್ಥಳ, ಗಣೇಶ್ ಪೈ ಬದಿಯಡ್ಕ, ಪ್ರಮೀಳಾ ಚುಳ್ಳಿಕಾನ, ಸುಂದರ ಬಾರಡ್ಕ, ರಾಮ ಪಟ್ಟಾಜೆ, ಜ್ಯೋತ್ಸ್ನಾ ಕಡಂದೇಲು, ಸುಶೀಲ ಪದ್ಮಾಣ, ಬಾಲಕೃಷ್ಣ ಬೇರಿಕೆ, ಧನ್ಯಶ್ರೀ ಸರಳಿ ಹಾಗೂ ಪ್ರಭಾವತಿ ಕೆದಿಲಾಯ ಸೇರಿದಂತೆ ಹಲವು ಕವಿಗಳು ಕವಿತೆಗಳನ್ನು ವಾಚಿಸಿದರು. ಒಟ್ಟು 21 ಮಂದಿ ಕವಿಗಳು ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.

ಸುಭಾಷ್ ಪಟ್ಟಾಜೆ ಅವರು ಕವಿತಾವಲೋಕನ ನಡೆಸಿದರು. ಹಿರಿಯ ನಾಗರಿಕರ ವೇದಿಕೆಯ ಬದಿಯಡ್ಕ ಘಟಕದ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್ ಸ್ವಾಗತಿಸಿದರು. ಸುಶೀಲ ಪದ್ಮಾಣ ವಂದಿಸಿದರು. ಅಧ್ಯಾಪಕಿ ಜ್ಯೋತ್ಸ್ನಾ ಕಡಂದೇಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ವಳಕ್ಕುಂಜ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries