ಮಂಜೇಶ್ವರ: ನ್ಯುಮೋನಿಯಾ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಂಜೇಶ್ವರ ದೇರಂಗಡಿಪಳ್ಳ-ಪುಷ್ಪಲತಾ ದಂಪತಿ ಪುತ್ರಿ ವೀಕ್ಷಾ(3) ಮೃತಪಟ್ಟಿದ್ದಾಳೆ. ಮಂಜೇಶ್ವರ ಎಸ್‍ವಿಟಿ ಶಾಲೆ ಎಲ್‍ಕೆಜಿ ವಿದ್ಯಾರ್ಥಿನಿಯಾಗಿದ್ದ ಈಕೆಗೆ ಜ್ವರ ಬಾಧಿಸಿದ್ದು, ತಪಾಸಣೆ ವೇಳೆ ನ್ಯುಮೋನಿಯಾ ಬಾಧಿಸಿರುವುದು ಪತ್ತೆಯಾಗಿತ್ತು. ಕಳೆದ ಮೂರು ವಾರಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕಿ ಚಿಕಿತ್ಸೆಗೆ ಲಕ್ಷಾಂತರ ರೂ. ವ್ಯಯಿಸಲಾಘಿದ್ದು, ಸಂಘ ಸಂಸ್ಥೆ, ಶಾಲೆ ವತಿಯಿಂದ ಹಣ ಸಂಗ್ರಹಿಸಿ ನೀಡಲಾಗಿತ್ತು.


