ಮುಳ್ಳೇರಿಯ: ಶಿಕ್ಷಣದ ಆತ್ಮವು ಪಠ್ಯಪುಸ್ತಕಗಳಲ್ಲಿ ಪಡೆದ ಮಾಹಿತಿಯಲ್ಲಿ ಮಾತ್ರವಲ್ಲ, ವಿದ್ಯಾರ್ಥಿಗಳು ನಾಡಿನ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಸಾಧ್ಯವಾಗಬೇಕು ಎಂದು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಹೇಳಿದರು.
ಕಾರಡ್ಕ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯಲ್ಲಿ(ಜಿ.ವಿ.ಎಚ್‍ಎಸ್‍ಎಸ್) ಹೊಸದಾಗಿ ನಿರ್ಮಿಸಲಾದ ಶೈಕ್ಷಣಿಕ ಬ್ಲಾಕ್ ನ್ನು ಸೋಮವಾರ ಸಚಿವರು ಉದ್ಘಾಟಿಸಿ ಮಾತನಾಡಿದರು.
ಶಾಲೆ ಕೇವಲ ಕಟ್ಟಡವಲ್ಲ, ಅದು ನಾಡಿನ ಆತ್ಮ, ಭರವಸೆ ಮತ್ತು ಭವಿಷ್ಯ. ಇದು ಪ್ರೀತಿ, ಸಹಬಾಳ್ವೆ ಮತ್ತು ಏಕತೆಯ ಕೊಂಡಿಗಳನ್ನು ಬೆಸೆಯುವ ಸ್ಥಳವಾಗಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ಮೂಲಭೂತ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಶಿಕ್ಷಣವು ಕೇವಲ ಅಕ್ಷರಗಳ ಜ್ಞಾನವಾಗಿರಬಾರದು ಮತ್ತು ಶಿಕ್ಷಣವು ಮೂಲಭೂತವಾಗಿರಬೇಕು ಎಂದು ಗಾಂಧೀಜಿ ಜಾಗೃತಗೊಳಿಸಿದ್ದರು ಎಂದು ಸಚಿವರು ಹೇಳಿದರು.
ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಸಾಬು ಅಬ್ರಹಾಂ ಮುಖ್ಯ ಅತಿಥಿಯಾಗಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಬಾಲನ್, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಜನನಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು, ಜಿಲ್ಲಾ ಪಂಚಾಯಿತಿ ಸದಸ್ಯೆ ಓ.ವತ್ಸಲಾ, ಬ್ಲಾಕ್ ಪಂಚಾಯಿತಿ ಸದಸ್ಯ ಎಸ್.ಆರ್. ಸತ್ಯವತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಾಲಕೃಷ್ಣನ್, ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನನ್ ಕಾಡಗಂ, ಟಿ.ಭಾಸ್ಕರನ್, ಎ.ವಿಜಯಕುಮಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಕೆ.ಜಯನ್, ಕೆ.ಪುರುಷೋತ್ತಮನ್, ಎಂ.ರತ್ನಾಕರ, ಎಂ.ಕೃಷ್ಣನ್, ಮಹಮ್ಮದ್, ಮಾಹಿನ್ ಕೇಳೋಟ್, ಎಸ್‍ಎಂಸಿ ಅಧ್ಯಕ್ಷ ಕೆ.ಸುರೇಶ್ ಕುಮಾರ್, ಪಿಟಿಎ ಅಧ್ಯಕ್ಷ ಕೆ.ಸುರೇಶ್ ಕುಮಾರ್, ಎಂ.ಪಿ. ರಂಜಿನಿ, ರಂಜಿತ್ ಕಾಡಗಂ, ಎಂ.ಸಂಜೀವ, ಎ.ಜ್ಯೋತಿಕುಮಾರಿ, ಪಿ.ಕುಂಜಂಬು, ಕೆ.ಆಶ್ರಿತಾ ಮತ್ತಿತರರು ಮಾತನಾಡಿದರು. ಸ್ಥಳೀಯಾಡಳಿತ ಬ್ಲಾಕ್ ಉಪವಿಭಾಗ ಸಹಾಯಕ. ಕಾರ್ಯಪಾಲಕ ಎಂಜಿನಿಯರ್ ಬಿ.ಕೆ. ರಾಜೇಶ್ ವರದಿ ಮಂಡಿಸಿದರು. ಮುಖ್ಯಶಿಕ್ಷಕ ಬಿ.ಎಸ್. ಸಂದೀಪ್ ಸ್ವಾಗತಿಸಿ, ಪಿಟಿಎ ಅಧ್ಯಕ್ಷ ಸುರೇಶ್ ಮೂಡಂಕುಳಂ ವಂದಿಸಿದರು.
ಕಿಪ್ಭಿಯ ಆರ್ಥಿಕ ನೆರವಿನೊಂದಿಗೆ, ಮೂರು ಅಂತಸ್ತಿನ ಶೈಕ್ಷಣಿಕ ಬ್ಲಾಕ್ ಅನ್ನು ಕಿಲ ಮತ್ತು ಸ್ಥಳೀಯಾಡಳಿತ ಎಂಜಿನಿಯರಿಂಗ್ ಇಲಾಖೆಯು 3.9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಈ ಕಟ್ಟಡವು ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿ, ಕಚೇರಿ ಸೌಲಭ್ಯಗಳು, ಪ್ರಯೋಗಾಲಯಗಳು, ಐಟಿ ವ್ಯವಸ್ಥೆಗಳು ಮತ್ತು ಶೌಚಾಲಯಗಳನ್ನು ಒಳಗೊಂಡಿದೆ. ಈ ಉದ್ದೇಶಕ್ಕಾಗಿ 32,000 ಲೀಟರ್ ಸಾಮಥ್ರ್ಯದ ಮಳೆನೀರಿನ ಟ್ಯಾಂಕ್ ಮತ್ತು 1000 ಲೀಟರ್ ಸಾಮಥ್ರ್ಯದ ಅಗ್ನಿಶಾಮಕ ಟ್ಯಾಂಕ್ ಅನ್ನು ಸಿದ್ಧಪಡಿಸಲಾಗಿದೆ.




