HEALTH TIPS

ಸತ್ಯದ ಪರ ನಿಲ್ಲುವೆ ಎಂದು 'ಸತ್ಯಾಗ್ರಹ' ವೆಬ್‌ಸೈಟ್ ಆರಂಭಿಸಿದ ರಾಹುಲ್ ಗಾಂಧಿ

ನವದೆಹಲಿ: ದೇಶದಲ್ಲಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗದಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶನಿವಾರ ಹೇಳಿದ್ದಾರೆ.


ದೇಶದಾದ್ಯಂತ ವಿಷಯಾಧಾರಿತ ಹೋರಾಟಗಳನ್ನು ಒಂದೇ ಕಡೆ ಸಂಘಟಿಸುವ ಉದ್ದೇಶದಿಂದ 'ಸತ್ಯಾಗಹ್ರ' ಡಿಜಿಟಲ್‌ ವೇದಿಕೆಗೆ ಚಾಲನೆ ನೀಡಿರುವ ಅವರು, ಸರ್ಕಾರದ ವಿರುದ್ಧದ ತಮ್ಮ ಪ್ರತಿಭಟನೆಯನ್ನು ದಾಖಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. 

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 157ನೇ ಜನ್ಮದಿನದ ಮರುದಿನವೇ 'ಸತ್ಯಾಗ್ರಹ' ಆರಂಭಿಸಲಾಗಿದೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, 'ದೇಶದಾದ್ಯಂತ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಹಲವು ಬಾರಿ ಅವರು ಒಬ್ಬಂಟಿಯಾಗಿ ನಿಲ್ಲುತ್ತಿದ್ದಾರೆ. ಜೆನ್-ಝಿ, ವಿದ್ಯಾರ್ಥಿಗಳು, ರೈತರು, ಬುಡಕಟ್ಟು ಸಮುದಾಯದವರು, ದಲಿತರು, ಮಹಿಳೆಯರು - ಹೀಗೆ ಪ್ರತಿಯೊಬ್ಬರ ಹೋರಾಟಕ್ಕೂ ಒಂದೊಂದು ಕಥೆ ಇದೆ. ಈ ರೀತಿ ಏಕಾಂಗಿ ಧ್ವನಿಗಳನ್ನು ಸುಲಭವಾಗಿ ಹತ್ತಿಕ್ಕಲಾಗುತ್ತದೆ. ಅದೇ ಕಾರಣದಿಂದ, ಎಲ್ಲರ ಧ್ವನಿಯನ್ನೂ ಒಂದುಗೂಡಿಸುವ ಪ್ರಯತ್ನವೇ ಸತ್ಯಾಗ್ರಹ' ಎಂದಿದ್ದಾರೆ.

'ಬಾಪು (ಮಹಾತ್ಮ ಗಾಂಧಿ) ಸತ್ಯವೇ ದೊಡ್ಡ ಅಸ್ತ್ರ ಎಂಬುದನ್ನು ಕಲಿಸಿದ್ದಾರೆ. ಆದರೆ, ಸತ್ಯದ ಜೊತೆ ನಿಲ್ಲುವುದು ಅದಕ್ಕಿಂತಲೂ ದೊಡ್ಡದು. ಯಾವುದಾದರೂ ಅನ್ಯಾಯದ ವಿರುದ್ಧ ನೀವೂ ಹೋರಾಡುತ್ತಿದ್ದರೆ, ನಿಮ್ಮ ಕಥೆಯನ್ನೂ ಹಂಚಿಕೊಳ್ಳಿ. ಅದಕ್ಕೆ ಎರಡೇ ನಿಮಿಷ ಸಾಕು' ಎಂದು ಹೇಳಿದ್ದಾರೆ.

'ನಿಮ್ಮ ಹೋರಾಟಕ್ಕೆ ಸತ್ಯಾಗ್ರಹದಲ್ಲಿ ಸ್ಥಾನವಿದೆ. ನಿಮ್ಮಂತೆ ಇನ್ನೂ ಯಾರೆಲ್ಲ ಹೋರಾಡುತ್ತಿದ್ದಾರೆ ಎಂಬುದು ಅಲ್ಲಿ ಕಾಣುತ್ತದೆ' ಎಂದು ತಿಳಿಸಿದ್ದಾರೆ.

ವಂಚನೆಯ ಮೇಲೆ ರಾಜಕಾರಣ: ರಾಹುಲ್ ಗಾಂಧಿ ರಾಜಕೀಯ ಇತಿಹಾಸ ಪ್ರಶ್ನಿಸಿದ BJP

'ಸಂಸತ್ತಿನಲ್ಲಿ, ಬೀದಿಗಳಲ್ಲಿ, ಪತ್ರಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಎಲ್ಲೆಲ್ಲ ಸಾಧ್ಯವಿದೆಯೋ ಅಲ್ಲೆಲ್ಲಾ ನಿಮ್ಮೊಂದಿಗೆ ನಿಲ್ಲಲು ಪ್ರಯತ್ನಿಸುತ್ತೇನೆ. ವಿರೋಧ ಪಕ್ಷದ ನಾಯಕನಾಗಿ ಅದು ನನ್ನ ಜವಾಬ್ದಾರಿ. ನಿಮ್ಮ ಸತ್ಯಾಗ್ರಹದ ಕಥೆಯನ್ನು ನನ್ನೊಂದಿಗೆ ಹಂಚಿಕೊಳ್ಳಿ' ಎಂದು ಭರವಸೆ ನೀಡಿದ್ದಾರೆ.

ವಿಡಿಯೊ ಸಂದೇಶವನ್ನೂ ಹಂಚಿಕೊಂಡಿರುವ ರಾಹುಲ್, 'ನಿಮಗೆಲ್ಲ ತಿಳಿದಿರುವಂತೆ ದೇಶದಾದ್ಯಂತ ಸತ್ಯವನ್ನು ಹತ್ತಿಕ್ಕಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಅನೇಕ ಪ್ರತಿಭಟನೆಗಳು ನಡೆಯುತ್ತಿವೆ. ಭೂಮಿಗಾಗಿ, ಮಹಿಳೆಯರ ಹಕ್ಕಿಗಾಗಿ, ಶಿಕ್ಷಣಕ್ಕಾಗಿ, ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಅವೆಲ್ಲವನ್ನೂ ಸಂಘಟಿಸಿ, ಒಂದೇ ವೇದಿಕೆಗೆ ತಂದು, ಹೋರಾಟಕ್ಕೆ ನೆರವಾಗುವುದು ನಮ್ಮ ಉದ್ದೇಶ. ಸತ್ಯಾಗ್ರಹ ವೆಬ್‌ಸೈಟ್ ನೋಡಿ. ಅಲ್ಲಿರುವ ನಮೂನೆಯನ್ನು ಭರ್ತಿ ಮಾಡಿ. ನಿಮ್ಮ ಚಳವಳಿ ಏನೆಂಬುದನ್ನು ನೋಂದಾಯಿಸಿ. ನಿಮಗೆ ನೆರವಾಗುವ ಪ್ರಯತ್ನ ಮಾಡುತ್ತೇವೆ' ಎಂದು ಹೇಳಿದ್ದಾರೆ.

'ಎಲ್ಲಿ ಸತ್ಯವನ್ನು ಹತ್ತಿಕ್ಕುತ್ತಿದೆಯೋ ಅಲ್ಲಿ ಜನರ ಹೋರಾಟಕ್ಕೆ ನೆರವಾಗುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ. ಸತ್ಯ ಬಹಳ ಮುಖ್ಯ. ಅದಕ್ಕಾಗಿ ದೇಶದ ಮೂಲೆ ಮೂಲೆಯಲ್ಲೂ ಹೋರಾಡುವುದು ಅತ್ಯಗತ್ಯ' ಎಂದು ಪ್ರತಿಪಾದಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries