HEALTH TIPS

ನೀರ್ಚಾಲಿನಲ್ಲಿ ಸಂಗೀತ, ಭರತನಾಟ್ಯ ಹಾಗೂ ಜಾನಪದ ನೃತ್ಯ ತರಗತಿಗಳು ಆರಂಭ-ಶಿವಾರ್ಪಣಂ ಕಲಾನಿಕೇತನ ಉದ್ಘಾಟನೆ

ಬದಿಯಡ್ಕ: ಸಂಗೀತ, ಭರತನಾಟ್ಯ ಹಾಗೂ ಜಾನಪದ ನೃತ್ಯ ತರಗತಿಗಳಿಗಾಗಿ ಶಿವಾರ್ಪಣಂ ಕಲಾನಿಕೇತನವನ್ನು ನೀರ್ಚಾಲಿನ ಉತ್ತಮ ಕಾಂಪ್ಲೆಕ್ಸ್‍ನಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.


ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದುಷಿ ಅಶ್ವಿನಿ ಕೆ.ಎಂ., ವಿದುಷಿ ವಿದ್ಯಾ ಬಾಲಕೃಷ್ಣನ್ ಹಾಗೂ ವಿದುಷಿ ಮೀನಾಕ್ಷಿ ಎಸ್. ಭಟ್ ಅವರ ನೇತೃತ್ವದಲ್ಲಿ ತರಗತಿಗಳನ್ನು ಆರಂಭಿಸಲಾಯಿತು.

ಜ್ಯೋತಿಷಿ ಗೀತಾ ಎಂ. ಭಟ್ ಮೊಳೆಯಾರು ಹಾಗೂ ಸಂಗೀತ ವಿದುಷಿ ಸರಸ್ವತಿ ಕೃಷ್ಣನ್ ಬೆಳ್ಳೂರು ಅವರು ಗೀತಾ ಬಾಲಕೃಷ್ಣನ್ ಅವರೊಂದಿಗೆ ದೀಪ ಬೆಳಗಿಸಿ ಕಲಾನಿಕೇತನವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಡಾ. ಪುರುಷೋತ್ತಮ ಭಟ್, ಗಣೇಶ್ ಕೃಷ್ಣ ಅಳಕೆ, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ಹರಿಪ್ರಸಾದ್ ಮಲ್ಲಡ್ಕ, ಶ್ಯಾಮಕುಮಾರ್ ಕೆ.ಎಂ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ಎ., ಶ್ಯಾಮಪ್ರಸಾದ್ ಸರಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕುಂಜ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಜನಿ ಸಂದೀಪ್ ಮತ್ತು ಅವಿನಾಶ್ ರೈ ಬದಿಯಡ್ಕ, ಹಿರಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ., ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಉದನೇಶ್ವರ ಬದಿಯಡ್ಕ ಹಾಗೂ ನೃತ್ಯ ಗುರುಗಳಾದ ವಿದುಷಿ ಡಾ. ವಿದ್ಯಾಲಕ್ಷ್ಮಿ ಕುಂಬಳೆ ದಂಪತಿ ಭಾಗವಹಿಸಿ ಶುಭ ಹಾರೈಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries