HEALTH TIPS

ಮಾದಕ ವಸ್ತು ವಿರೋಧಿ ಹೋರಾಟಗಾರ ಝೋಟಾ ಹತ್ಯೆ :ಕೊಲೆ ಆರೋಪಿ ಅಂಗಡಿಗೆ ಬೆಂಕಿ

ಚಂಡೀಗಢ (PTI): ಮಾದಕ ವಸ್ತು ವಿರೋಧಿ ಹೋರಾಟಗಾರ ಪರ್ವೀಂದರ್ ಸಿಂಗ್ ಅಲಿಯಾಸ್‌ ಝೋಟಾ ಅವರನ್ನು ಹತ್ಯೆ ಮಾಡಿದ ಔಷಧ ಅಂಗಡಿಯ ಮಾಲೀಕ ಅಶ್ವನಿ ಕುಮಾರ್ ಅವರ ನಿವಾಸದ ಒಂದು ಭಾಗವನ್ನು ಪಂಜಾಬ್‌ನ ಮನ್ಸಾ ಜಿಲ್ಲೆಯ ಅಧಿಕಾರಿಗಳು ಬುಧವಾರ ತೆರವುಗೊಳಿಸಿದ್ದಾರೆ. ಈ ಮಧ್ಯೆ ಗುಂಪೊಂದು ಔಷಧ ಅಂಗಡಿಗೆ ಬೆಂಕಿ ಹಚ್ಚಿದೆ. 


ವೀರನಗರದಲ್ಲಿರುವ ಆಶ್ವನಿ ಕುಮಾರ್ ನಿವಾಸದ ಮುಂಭಾಗವನ್ನು ಜೆಸಿಬಿ ಮೂಲಕ ತೆರವುಗೊಳಿಸುವ ವೇಳೆ, 'ನಿಹಾಂಗ'ರು ಸೇರಿದಂತೆ ಉದ್ರಿಕ್ತರ ಗುಂಪು ಭಾರೀ ಪೊಲೀಸ್‌ ಭದ್ರತೆಯ ನಡುವೆಯೂ ಒಳನುಗ್ಗಿ ಔಷಧ ಮಳಿಗೆಗೆ ಬೆಂಕಿ ಹಚ್ಚಿತು. ಇನ್ನೂ ಹಲವರು ಹರ್ಷೋದ್ಗಾರ ಮಾಡಿದರು.

ಅನಧಿಕೃತ ನಿರ್ಮಾಣ ಕಾರ್ಯದ ಬಗ್ಗೆ ಮಾಹಿತಿ ದೊರೆತ ಕಾರಣ ತೆರವು ಕಾರ್ಯ ನಡೆಸಲಾಗಿದೆ.

ಔಷಧ ಅಂಗಡಿಯಲ್ಲಿ ಅಶ್ವನಿ ಅವರು ವೃದ್ಧರೊಬ್ಬರಿಗೆ ವ್ಯಸನಕಾರಿ ವಸ್ತುವೊಂದನ್ನು ಮಾರಾಟ ಮಾಡುತ್ತಿದ್ದು ದನ್ನು ಝೋಟಾ ಮಂಗಳವಾರ ಪ್ರಶ್ನಿಸಿ ದ್ದರು. ಈ ವೇಳೆ ಅಶ್ವನಿ ಅವರು ಝೋಟಾ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದರು. ಬಳಿಕ ಆರೋಪಿಯನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದರು.

ಝೋಟಾ ಹತ್ಯೆಯ ಬೆನ್ನಲ್ಲೇ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಝೋಟಾ ಬೆಂಬಲಿಗರು ಔಷಧ ಅಂಗಡಿಯನ್ನು ಧ್ವಂಸಗೊಳಿಸಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries