ಅಥೆನ್ಸ್: ಯುರೋಪ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳು ಈಗ ಗ್ರೀಸ್ ಅನ್ನು ತಲುಪಿವೆ. ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಮತ್ತು ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಯುವಕರು ಅಥೆನ್ಸ್‌ನ ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.
ಹೆಚ್ಚುತ್ತಿರುವ ಜೀವನ ವೆಚ್ಚ, ಇಂಧನ ಬೆಲೆ ಕುರಿತು ಆಕ್ರೋಶ. ಶಾಲೆಗಳ ಸ್ಥಿತಿಗತಿ ಮತ್ತು ವಸತಿಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಹಣ ವ್ಯಯಿಸಬೇಕಾಗಿರುವುದರ ಬಗ್ಗೆಯೂ ಐರೋಪ್ಯ ದೇಶಗಳ ಯುವಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ. ಫ್ರಾನ್ಸ್, ಇಟಲಿ ಮತ್ತು ಅಲ್ಬೇನಿಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಗ್ರೀಸ್‌ನಲ್ಲಿಯೂ ಆರಂಭವಾಗಿದೆ.
'ಗ್ರೀಸ್‌ನಿಂದ ಫ್ರಾನ್ಸ್‌ವರೆಗೂ, ಶಿಕ್ಷಣಕ್ಕೆ ಹಣ ನೀಡಿ' ಮತ್ತು 'ಬದುಕುವುದೋ ಅಥವಾ ಶಿಕ್ಷಣ ವೆಚ್ಚ ಭರಿಸುವುದೋ' ಎಂದು ಬರೆದಿರುವ ಬ್ಯಾನರ್‌ಗಳನ್ನು ಹಿಡಿದು ಅಥೆನ್ಸ್‌ನಲ್ಲಿ ಪ್ರತಿಭಟಿಸಲಾಗುತ್ತಿದೆ.


