HEALTH TIPS

ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ CJP ಕಾರ್ಯಕರ್ತರಿಗೆ ಬೆದರಿಕೆ: ದೀಪ್ಕೆ

ಛತ್ರಪತಿ ಸಂಭಾಜಿನಗರ: ನವದೆಹಲಿಯಲ್ಲಿ ಅಕ್ಟೋಬರ್ 10ರಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್ ನೀಡಿ ಒತ್ತಡ ಹೇರುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಂಗಳವಾರ ಆರೋಪಿಸಿದ್ದಾರೆ. 


ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಪ್ಕೆ, ಸರ್ಕಾರದ ಕ್ರಮವನ್ನು ಸರ್ವಾಧಿಕಾರ ಧೋರಣೆ ಎಂದು ಟೀಕಿಸಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೀಪ್ಕೆ, 'ಒಂದು ದೇಶ, ಒಂದು ಚುನಾವಣೆ' ಕೇವಲ ಘೋಷಣೆಯಾಗಿದ್ದು, ಇದರ ಹಿಂದಿನ ಅಸಲಿ ಹುನ್ನಾರ 'ಒಂದು ದೇಶ, ಒಂದೇ ರಾಜಕೀಯ ಪಕ್ಷ' ಎಂಬುದಾಗಿದೆ ಎಂದು ಟೀಕಿಸಿದ್ದಾರೆ.

'ಮಹಾರಾಷ್ಟ್ರ ಪೊಲೀಸರು ದೇಶದಲ್ಲೇ ಅತ್ಯುತ್ತಮ ಪಡೆಯಾಗಿದ್ದು, ದೆಹಲಿ ಪೊಲೀಸರು ಅವರಿಂದ ಕಲಿಯಬೇಕಿದೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಆದರೆ, ಚಂದ್ರಾಪುರ ಪೊಲೀಸರು ನಮ್ಮ ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿ, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯುತ್ತಿರುವುದು ಮತ್ತು ಪ್ರಯಾಣ ವೆಚ್ಚದ ಮೂಲವನ್ನು ಪ್ರಶ್ನಿಸುತ್ತಿರುವುದು ತೀವ್ರ ನೋವುಂಟುಮಾಡಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಪ್ರತಿಭಟನೆ ಹಿಂಸಾತ್ಮಕವಾಗಲಿದೆ ಎಂದು ಪೊಲೀಸರು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರತಿಭಟನೆ ಹಿಂಸಾರೂಪ ತಾಳುತ್ತದೆ ಎಂದು ಪೊಲೀಸರಿಗೆ ಮೊದಲೇ ತಿಳಿದಿದ್ದು ಹೇಗೆ? ಅವರೇನಾದರೂ ಮುಂಚಿತವಾಗಿಯೇ ಸಂಚು ರೂಪಿಸಿದ್ದಾರೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.

'ನಾವು ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತೇವೆ. ಇದು ಹಿಂಸಾತ್ಮಕವೇ?' ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 10ರಂದು ಪ್ರತಿಭಟನೆ ನಡೆಸಲು ಸಿಜೆಪಿ ನಿರ್ಧರಿಸಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries