HEALTH TIPS

CNG ತುಂಬಿಸುವಾಗ ಕಾರು ಸ್ಫೋಟ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಕರ್ಜನ್: ರಾಷ್ಟ್ರೀಯ ಹೆದ್ದಾರಿ-48ರ ಕರ್ಜನ್ ಬಳಿಯ ಇಂಧನ ಕೇಂದ್ರದಲ್ಲಿ ಕಾರಿಗೆ ಅಓಉ ತುಂಬಿಸುವ ವೇಳೆ ಅದರ ಗ್ಯಾಸ್ ಟ್ಯಾಂಕ್ ಸಿಡಿದು ಪ್ರಬಲ ಸ್ಫೋಟ ಸಂಭವಿಸಿದ ಘಟನೆ ಅಕ್ಟೋಬರ್ 1ರಂದು ನಡೆದಿದೆ.

ಜಿಂದಾಲ್ ಕಂಪೆನಿಯ ಎದುರಿನಲ್ಲಿರುವ ಅಓಉ ಕೇಂದ್ರದಲ್ಲಿ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. 


ಕಾರಿಗೆ ಇಂಧನ ತುಂಬಿಸುವ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಅದರ ಗ್ಯಾಸ್ ಟ್ಯಾಂಕ್ ಇದ್ದಕ್ಕಿದ್ದಂತೆ ಸಿಡಿದಿದ್ದು, ಪಂಪ್ ಬಳಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಅದೃಷ್ಟವಶಾತ್ ಸ್ಫೋಟ ಸಂಭವಿಸಿದ ವೇಳೆ ಕಾರಿನೊಳಗೆ ಯಾರೂ ಇರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಫೋಟದ ತೀವ್ರತೆಗೆ ಕಾರಿನ ಹಿಂಭಾಗದ ಭಾಗಗಳು ಹಾಗೂ ಒಡೆದ ಗಾಜಿನ ಚೂರುಗಳು ವಾಹನದಿಂದ ಹಲವಾರು ಮೀಟರ್ ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟದ ಪರಿಣಾಮ ಹತ್ತಿರದಲ್ಲಿ ನಿಲ್ಲಿಸಲಾಗಿದ್ದ ಇನ್ನೆರಡು ವಾಹನಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಕರ್ಜನ್ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.


A massive explosion erupted while a CNG car was being refuelled at a fuel station near Karjan on National Highway-48 in Gujarat. The blast tore apart the rear section of the vehicle, sending metal and glass fragments flying across the area. Two nearby vehicles were also damaged Show more

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries