ಗಾಂಧಿನಗರ: ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ದುರ್ನಡತೆ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಇಬ್ಬರು ಮಧ್ಯಮ ಹಂತದ IAS ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಲು ಗುಜರಾತ್ ಸರಕಾರ ಗುರುವಾರ ಆದೇಶಿಸಿದೆ.
2011ರ ಬ್ಯಾಚ್ ನ ಐಎಎಸ್ ಅಧಿಕಾರಿ ಕಂಕಿಪಾಟಿ ರಾಜೇಶ್ ಮತ್ತು 2010ರ ಬ್ಯಾಚ್ ನ ಅಧಿಕಾರಿ ಗೌರವ್ ದಹಿಯಾ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.
ಇಬ್ಬರ ಸೇವಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಅಧಿಕಾರಿಗಳ ಸೇವಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಕ್ರಮಕ್ಕೆ ಸೂಚಿಸಿತ್ತು. 'ಸೇವೆಗೆ ಸೂಕ್ತತೆ'ಗೆ ಸಂಬಂಧಿಸಿದ 'ಅಖಿಲ ಭಾರತ ಸೇವಾ ನಿಯಮಗಳು' (All India Services Rules)-13ರ ಅಡಿಯಲ್ಲಿ ಇಬ್ಬರೂ 'ಸೇವೆಗೆ ಅನರ್ಹ' ಎಂದು ಕಂಡುಬಂದ ಹಿನ್ನೆಲೆಯಲ್ಲಿ ಅವಧಿಗೂ ಮುನ್ನ ನಿವೃತ್ತಿಗೊಳಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
"DoPT ಸೂಚಿಸಿದ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸಿದ್ದೇವೆ. ಇಬ್ಬರು ಅಧಿಕಾರಿಗಳಿಗೆ ಅವಧಿಗೂ ಮುನ್ನ ನಿವೃತ್ತಿ ಆದೇಶ ನೀಡುವಲ್ಲಿ ಗುಜರಾತ್ ಸರಕಾರವು DoPTಯ ಆದೇಶಗಳನ್ನು ಪಾಲಿಸಿದೆ" ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ತಿಳಿಸಿದ್ದಾರೆ.
ರಾಜೇಶ್ ವಿರುದ್ಧ ತನಿಖೆ:
2011ರ ಬ್ಯಾಚ್‌ನ ಅಧಿಕಾರಿಯಾಗಿರುವ ರಾಜೇಶ್ ಅವರು ಜುಲೈ 2022ರಿಂದ ಅಮಾನತಿನಲ್ಲಿದ್ದಾರೆ. ಸುರೇಂದ್ರನಗರ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ED) ಅವರ ವಿರುದ್ಧ ತನಿಖೆ ನಡೆಸುತ್ತಿವೆ.
ಸಿಬಿಐ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಬಳಿಕ ಮೇ 2022ರಲ್ಲಿ ದೋಷಾರೋಪಣ ಪಟ್ಟಿಯನ್ನೂ ಸಲ್ಲಿಸಿತ್ತು. ಸುಲಿಗೆ, ಲಂಚ ಸ್ವೀಕಾರ ಮತ್ತು ಸಾರ್ವಜನಿಕ ಹುದ್ದೆಯ ದುರುಪಯೋಗದ ಆರೋಪಗಳನ್ನು ದೋಷಾರೋಪಣ ಪಟ್ಟಿಯಲ್ಲಿ ಮಾಡಲಾಗಿತ್ತು.
ಬಳಿಕ EDಯು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ಆರಂಭಿಸಿ, ಅಕ್ಟೋಬರ್ 2022ರಲ್ಲಿ ದೂರು ದಾಖಲಿಸಿತ್ತು. ಅಪರಾಧದ ಮೂಲಕ ಗಳಿಸಿದ ಹಣದಿಂದ ಆಸ್ತಿಗಳನ್ನು ಮಾಡಲಾಗಿದೆ ಎಂದು ಆರೋಪಿಸಿ, ಸೂರತ್ ನಲ್ಲಿರುವ ಆಸ್ತಿಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿದಂತೆ 1.55 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ED ಜಪ್ತಿ ಮಾಡಿತ್ತು.
271 ಬಂದೂಕು ಪರವಾನಗಿಗಳ ವಿತರಣೆಗೆ ಸಂಬಂಧಿಸಿದಂತೆ ಲಂಚ ಪಡೆದು ಪರವಾನಗಿ ನೀಡುವ ಜಾಲವನ್ನು ರಾಜೇಶ್ ನಡೆಸುತ್ತಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ಜಿಲ್ಲಾ ಪೊಲೀಸರ ನಕಾರಾತ್ಮಕ ಭದ್ರತಾ ಶಿಫಾರಸುಗಳ ಹೊರತಾಗಿಯೂ ಕೆಲವು ಪರವಾನಗಿಗಳಿಗೆ ಅನುಮತಿ ನೀಡಲಾಗಿತ್ತು ಎಂದು ತನಿಖೆಯಲ್ಲಿ ಕಂಡುಬಂದಿತ್ತು. ಅರ್ಜಿದಾರರಿಗೆ ನಗದು ಲಂಚ ನೀಡುವಂತೆ ಒತ್ತಾಯಿಸಲಾಗುತ್ತಿತ್ತು ಎಂಬ ಆರೋಪವೂ ಇತ್ತು.
ದಹಿಯಾ ವಿರುದ್ಧ ಆರೋಪ:
2010ರ ಬ್ಯಾಚ್‌ನ ಅಧಿಕಾರಿಯಾಗಿರುವ ದಹಿಯಾ ಅವರನ್ನು ದುರ್ನಡತೆ, ಅನೈತಿಕ ನಡವಳಿಕೆ, ಏಕಕಾಲದಲ್ಲಿ ಇಬ್ಬರು ಪತ್ನಿಯರನ್ನು ಹೊಂದಿರುವುದು (ಬಿಗಾಮಿ) ಹಾಗೂ ವಂಚನೆ ಆರೋಪಗಳ ಹಿನ್ನೆಲೆಯಲ್ಲಿ ಆಗಸ್ಟ್ 2019ರಲ್ಲಿ ಅಮಾನತುಗೊಳಿಸಲಾಗಿತ್ತು.
ದಿಲ್ಲಿ ಮೂಲದ ಮಹಿಳೆಯೊಬ್ಬರು ಮಾಡಿದ್ದ ಆರೋಪಗಳ ಕುರಿತು ಐವರು ಸದಸ್ಯರ ತನಿಖಾ ಸಮಿತಿಯು ಸಲ್ಲಿಸಿದ ಪ್ರಾಥಮಿಕ ವರದಿ ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು. ದುರ್ನಡತೆ, ಒಂದೇ ಸಮಯದಲ್ಲಿ ಇಬ್ಬರು ಪತ್ನಿಯರನ್ನು ಹೊಂದಿದ್ದ ಆರೋಪ, ಅನೈತಿಕ ನಡವಳಿಕೆ ಮತ್ತು ವಂಚನೆ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು.
ಅಮಾನತಿನ ಸುಮಾರು ನಾಲ್ಕು ವರ್ಷಗಳ ಬಳಿಕ, ಜುಲೈ 2023ರಲ್ಲಿ ಅವರ ಅಮಾನತನ್ನು ರದ್ದುಗೊಳಿಸಿ ಮತ್ತೆ ಸೇವೆಗೆ ನೇಮಿಸಲಾಗಿತ್ತು. ಬಳಿಕ ಅವರನ್ನು ಗಾಂಧಿನಗರದ ಹೆಚ್ಚುವರಿ ಅಭಿವೃದ್ಧಿ ಆಯುಕ್ತರನ್ನಾಗಿ ನೇಮಿಸಲಾಗಿತ್ತು.
ಇನ್ನಷ್ಟು ಅಧಿಕಾರಿಗಳ ವಿರುದ್ಧ ಕ್ರಮ?:
ಅಮಾನತುಗೊಂಡಿರುವ ಇತರ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಪರಿಗಣನೆಯಲ್ಲಿರುವ ಹೆಸರುಗಳಲ್ಲಿ ಐಎಎಸ್ ಅಧಿಕಾರಿಗಳಾದ ಆಯುಷ್ ಓಕ್ ಮತ್ತು ರಾಜೇಂದ್ರ ಪಟೇಲ್ ಹಾಗೂ ಜಿಎಎಸ್ ಕೇಡರ್ ಅಧಿಕಾರಿ ಕೇತ್ಕಿ ವ್ಯಾಸ್ ಸೇರಿದ್ದಾರೆ.'ಸೇವೆಗೆ ಅನರ್ಹ': ಗುಜರಾತ್ ನ ಇಬ್ಬರು IAS ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ
ಒಬ್ಬರ ವಿರುದ್ಧ ಭ್ರಷ್ಟಾಚಾರ, ಲಂಚದ ಆರೋಪ; ಇನ್ನೊಬ್ಬರ ವಿರುದ್ಧ ದ್ವಿಪತ್ನಿತ್ವ, ದುರ್ನಡತೆ ಆರೋಪ
ಗಾಂಧಿನಗರ: ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ದುರ್ನಡತೆ ಸೇರಿದಂತೆ ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಇಬ್ಬರು ಮಧ್ಯಮ ಹಂತದ IAS ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೊಳಿಸಲು ಗುಜರಾತ್ ಸರಕಾರ ಗುರುವಾರ ಆದೇಶಿಸಿದೆ.
2011ರ ಬ್ಯಾಚ್ ನ ಐಎಎಸ್ ಅಧಿಕಾರಿ ಕಂಕಿಪಾಟಿ ರಾಜೇಶ್ ಮತ್ತು 2010ರ ಬ್ಯಾಚ್ ನ ಅಧಿಕಾರಿ ಗೌರವ್ ದಹಿಯಾ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಲಾಗಿದೆ. ಇಬ್ಬರ ಸೇವಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಅಧಿಕಾರಿಗಳ ವಿರುದ್ಧ ಕ್ರಮ?:
ಅಮಾನತುಗೊಂಡಿರುವ ಇತರ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಪರಿಗಣನೆಯಲ್ಲಿರುವ ಹೆಸರುಗಳಲ್ಲಿ ಐಎಎಸ್ ಅಧಿಕಾರಿಗಳಾದ ಆಯುಷ್ ಓಕ್ ಮತ್ತು ರಾಜೇಂದ್ರ ಪಟೇಲ್ ಹಾಗೂ ಜಿಎಎಸ್ ಕೇಡರ್ ಅಧಿಕಾರಿ ಕೇತ್ಕಿ ವ್ಯಾಸ್ ಸೇರಿದ್ದಾರೆ.

