HEALTH TIPS

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

 ನವದೆಹಲಿ/ಜೆರುಸಲೆಮ್: ಆಗಸದಲ್ಲಿ ಹಾರಾಡುತ್ತಿದ್ದ ವಿಮಾನದೊಳಗೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ತಡೆದು, 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಭಾರತ ಮತ್ತು ಇಸ್ರೇಲ್‌ನ ಈ "ರಿಯಲ್ ಹೀರೊ"ಗೆ ಇಸ್ರೇಲ್ ದೇಶ ತನ್ನ ಅತ್ಯುನ್ನತ ಗೌರವವನ್ನು ನೀಡಲು ಮುಂದಾಗಿದೆ.


2027ರ ಮೇ ತಿಂಗಳಲ್ಲಿ ನಡೆಯಲಿರುವ ಇಸ್ರೇಲ್‌ನ ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ (Celebratory Flame) ಬೆಳಗಿಸಲು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆತನ್ಯಾಹು ಅಧಿಕೃತ ಆಹ್ವಾನ ನೀಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಮಾರಂಭಕ್ಕೆ ಆಹ್ವಾನಿಸಿರುವ ನೆತನ್ಯಾಹು, ಮುಂದಿನ ವರ್ಷ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸ್ಮಿತ್ ಮಚ್ಚರ್ ಹಾಗೂ ಮೋದಿ ಅವರು ಜ್ಯೋತಿ ಬೆಳಗಿಸಬೇಕು ಎಂದು ಬಯಸಿರುವುದಾಗಿ ತಿಳಿಸಿದ್ದಾರೆ.

ಸಾಂಪ್ರದಾಯಿಕವಾಗಿ ಇಸ್ರೇಲಿ ನಾಗರಿಕರಿಗೆ ಮಾತ್ರ ಸೀಮಿತವಾಗಿರುವ ಈ ಅಪರೂಪದ ಗೌರವವನ್ನು ಈಗ ಭಾರತೀಯರಿಗೆ ನೀಡಲಾಗುತ್ತಿರುವುದು ವಿಶೇಷವಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೈಲಟ್ ಜೊತೆ ದೂರವಾಣಿ ಮೂಲಕ ಮಾತನಾಡಿರುವ ನೆತನ್ಯಾಹು, “ಭಾರತ ಮತ್ತು ಇಸ್ರೇಲ್‌ನ ಧೈರ್ಯಶಾಲಿ ಜನರ ನಿಜವಾದ ಹೀರೋ ನೀವು. ಇಡೀ ಜಗತ್ತಿನ ಹೀರೋ ಕೂಡ ನೀವೇ” ಎಂದು ಹೇಳಿದ್ದಾರೆ. ಈ ಸಂಭಾಷಣೆಯ ವಿಡಿಯೋವನ್ನು ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿದೆ.

ಯುಎಇ ತನಿಖಾಧಿಕಾರಿಗಳ ಪ್ರಕಾರ, ಸಹ ಪೈಲಟ್ ಕೊಡಲಿಯಿಂದ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ನಡೆಸುವ ಮೂಲಕ ‘ಭಯೋತ್ಪಾದಕ ಕೃತ್ಯ’ಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ದಾಳಿ ಹೇಗೆ ನಡೆಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಮಚ್ಚರ್, ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವ ಧಾರ್ಮಿಕ ಮುಸ್ಲಿಮರಂತೆ ಸಹ ಪೈಲಟ್ ಪ್ರಾರ್ಥನೆ ಮಾಡಲು ಸಮಯ ನೀಡುವಂತೆ ಕೇಳಿಕೊಂಡಿದ್ದ. “ಅಲ್ಲಿ ಸಾಕಷ್ಟು ಸ್ಥಳೀಯರು ಪ್ರಾರ್ಥನೆ ಮಾಡುತ್ತಾರೆ. ಅದು ಅಸಾಮಾನ್ಯವಾದದ್ದೇನಲ್ಲ. ಅವರು ಪ್ರಾರ್ಥಿಸುತ್ತಿದ್ದಾಗ ಗೌರವದ ದೃಷ್ಟಿಯಿಂದ ನಾನು ಹಿಂದಕ್ಕೆ ನೋಡದೆ ಮುಂಭಾಗವನ್ನೇ ನೋಡುತ್ತಿದ್ದೆ.

ಸುಮಾರು ನಾಲ್ಕೈದು ನಿಮಿಷಗಳ ಬಳಿಕ ಇದ್ದಕ್ಕಿದ್ದಂತೆ ನನ್ನ ತಲೆಯ ಹಿಂಭಾಗಕ್ಕೆ ಭಾರೀ ಹೊಡೆತ ಬಿತ್ತು. ಏನೋ ಸರಿಯಿಲ್ಲ ಎಂದು ಮೊದಲಿಗೆ ಭಾವಿಸಿದೆ. ಆದರೆ, ನಂತರ ಒಂದರ ಹಿಂದೊಂದರಂತೆ ಹೊಡೆತಗಳು ಬೀಳತೊಡಗಿದವು. ನನ್ನೊಂದಿಗೆ ಕಾಕ್‌ಪಿಟ್‌ನಲ್ಲಿದ್ದ ವ್ಯಕ್ತಿಯೇ ದಾಳಿ ಮಾಡುತ್ತಿದ್ದಾನೆ ಎಂಬುದು ಅರಿವಾಯಿತು. ಬಳಿಕ ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಕಾಕ್‌ಪಿಟ್ ಬಾಗಿಲನ್ನು ತೆರೆದೆ. ಆದರೆ, ಸಹ ಪೈಲಟ್ ಮತ್ತೆ ಅದನ್ನು ಮುಚ್ಚಲು ಯತ್ನಿಸಿದ.

ಬಳಿಕ “ನನ್ನೊಳಗೆ ಉಳಿದಿದ್ದ ಕೊನೆಯ ಶಕ್ತಿಯನ್ನೂ ಬಳಸಬೇಕಾಗಿತ್ತು. ಹಾಗೆ ಮಾಡದಿದ್ದರೆ ನನ್ನ ಸಾವು ಖಚಿತ ಎಂಬುದು ನನಗೆ ತಿಳಿದಿತ್ತು. ಹೀಗಾಗಿ ಎಲ್ಲವನ್ನೂ ಬಲವಾಗಿ ಒತ್ತಿ, ಬಾಗಿಲಿನತ್ತ ಧಾವಿಸಿ ಅದನ್ನು ತೆರೆದೆ. ಅದೃಷ್ಟವಶಾತ್ ಹೊರಗೆ ಜನರು ಕಾಯುತ್ತಿದ್ದರು ಎಂದು ವಿವರಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries