HEALTH TIPS

ಸಂಸತ್ತಿನ ಮುಂಗಾರು ಅಧಿವೇಶನ ಮುಂದೂಡಿಕೆಯಾಗಿ 100 ದಿನ: ಹೊಸ ದಾಖಲೆ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೊಳಿಸುವ ಸಂಬಂಧ ಚರ್ಚಿಸಲು ವಿಶೇಷ ಅಧಿವೇಶನಕ್ಕಾಗಿ ಕಾಯುವಿಕೆ ಮುಂದುವರಿದಿದೆ. ಏತನ್ಮಧ್ಯೆ, ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಸಂಸತ್ತಿನ ಮುಂಗಾರು ಅಧಿವೇಶನವು ವಿಸರ್ಜನೆಯೂ ಆಗದೆ 100 ದಿನಗಳನ್ನು ಪೂರೈಸಿರುವುದು ಹೊಸ ದಾಖಲೆಯಾಗಿದೆ. 


ಸಂಸತ್ತಿನ ಉಭಯ ಸದನಗಳನ್ನು ಆಗಸ್ಟ್ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಎರಡೂ ಸದನಗಳ ಕಲಾಪವನ್ನು ಈವರೆಗೆ ವಿಸರ್ಜಿಸಿಲ್ಲ.

ಈ ಹಿಂದೆ 2008ರಲ್ಲಿ ಅಧಿವೇಶನವನ್ನು 87 ದಿನಗಳ ವರೆಗೆ ಮುಂದೂಡಿದ್ದು ದಾಖಲೆಯಾಗಿತ್ತು.

ಮಹಿಳಾ ಮೀಸಲು ಕಾನೂನು ಜಾರಿಗೊಳಿಸುವ ಸಲುವಾಗಿ ತಿದ್ದುಪಡಿ ಮಸೂದೆ ಅಂಗೀಕರಿಸಲು ವಿಶೇಷ ಅಧಿವೇಶನ ಕರೆಯಲು ಅಥವಾ ಅಧಿವೇಶನದ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟನೆ ಇಲ್ಲ.

ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಅದನ್ನು ವಿಸರ್ಜಿಸಲು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ಸಂವಿಧಾನದಲ್ಲಿ ನಿಗದಿಯಾಗಿಲ್ಲ. ಅಧಿವೇಶನವನ್ನು ವಿಸರ್ಜಿಸದೆ ದೀರ್ಘಕಾಲದವರೆಗೆ ಮುಂದೂಡುವುದು ಅಕ್ರಮವೂ ಅಲ್ಲ.

2029ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ದಾರಿ ಮಾಡಿಕೊಡುವ ಹಾಗೂ ಕ್ಷೇತ್ರ ಪುನರ್‌ವಿಂಗಡಣೆಯ ಮೂಲಕ ಲೋಕಸಭೆ ಸದಸ್ಯ ಬಲವನ್ನು ಪ್ರಸ್ತುತ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವುದು ಪ್ರಸ್ತಾವಿತ ಸಂವಿಧಾನ ತಿದ್ದುಪಡಿಯ ಉದ್ದೇಶವಾಗಿದೆ.

ಆದರೆ, ಈ ಬಗ್ಗೆ ದಕ್ಷಿಣದ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಅದನ್ನು ಪರಿಹರಿಸುವ ಸಲುವಾಗಿ, ಪ್ರತಿ ರಾಜ್ಯವೂ ಲೋಕಸಭೆಯಲ್ಲಿ ಹೊಂದಿರುವ ಸ್ಥಾನಗಳಲ್ಲಿ ಶೇ 50ರಷ್ಟು ಹೆಚ್ಚಳ ಮಾಡುವುದನ್ನು ಸರ್ಕಾರ ಪರಿಗಣಿಸಿದೆ ಎನ್ನಲಾಗಿದೆ.

ಕಾಂಗ್ರೆಸ್ ಟೀಕೆ2026ರ ಮುಂಗಾರು ಅಧಿವೇಶನವನ್ನು ಮುಂದೂಡಿ ಇಂದಿಗೆ ನೂರು ದಿನವಾಗಿದೆ. ಇನ್ನೂ ಮುಕ್ತಾಯಗೊಳಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್‌ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರನ್ನು ಉದ್ದೇಶಿಸಿ, ‘ಪಿಎಂ–ಎಚ್‌ಎಂ ಜೋಡಿಯು ಕ್ಷೇತ್ರ ಪುನರ್ ವಿಂಗಡಣೆ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಬಹುಮತ ಪಡೆಯಲು ಇನ್ನೂ ಪ್ರಯತ್ನ ಮುಂದುವರಿಸಿದೆ’ ಎಂದು ಟೀಕಿಸಿದ್ದಾರೆ.

‘ಹಳೆ ಮಸೂದೆಯು 2026ರ ಏಪ್ರಿಲ್ 17ರಂದು ಭಾರೀ ಸೋಲು ಕಂಡಿದೆ. ಹೊಸ ಮಸೂದೆಯಲ್ಲಿ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ನಾಲ್ಕು ಬಾರಿ ಪತ್ರ ಬರೆದಿದ್ದರೂ ಸರ್ವಪಕ್ಷ ಸಭೆಯನ್ನು ಕರೆದಿಲ್ಲ ಎಂಬುದು ಹಾಗಿರಲಿ, ಹೊಸ ಪ್ರಸ್ತಾವನೆಯ ಬಗ್ಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಗಂಭೀರವಾಗಿ, ರಚನಾತ್ಮಕ ರೀತಿಯಲ್ಲಿ ಚರ್ಚಿಸಿಲ್ಲ’ ಎಂದು ಉಲ್ಲೇಖಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries