HEALTH TIPS

ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ಮಹಾಸಭೆ: ಬಂಡವಾಳ ಹೂಡಿಕೆದಾರರಿಗೆ ಶೇ. 10 ಲಾಭಾಂಶ ನೀಡಲು ತೀರ್ಮಾನ

ಕುಂಬಳೆ ಕಚೇರಿಯಲ್ಲಿ ವಾರ್ಷಿಕ ಮಹಾಸಭೆ; ಸಂಘದ ಬೆಳವಣಿಗೆ ಹಾಗೂ ಸಾಧನೆಗಳ ಕುರಿತು ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ'ಸೋಜಾ ಮೆಚ್ಚುಗೆ

ಕುಂಬಳೆ: ಬೇಳ ಪಬ್ಲಿಕ್ ವೆಲ್ಫೇರ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕುಂಬಳೆ ಕಚೇರಿಯಲ್ಲಿ ಅಧ್ಯಕ್ಷರಾದ ನ್ಯಾಯವಾದಿ ಥೋಮಸ್ ಡಿ'ಸೋಜಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಸಕ್ತ ಸಾಲಿನಲ್ಲಿ ಸಂಘವು ಗಳಿಸಿದ ಲಾಭದಲ್ಲಿ ಎಲ್ಲಾ ಬಂಡವಾಳ ಹೂಡಿಕೆದಾರರಿಗೆ ಶೇ. 10ರಷ್ಟು ಲಾಭಾಂಶ (ಡಿವಿಡೆಂಡ್) ನೀಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷೀಯ ಭಾಷಣ ಮಾಡಿದ ಥೋಮಸ್ ಡಿ'ಸೋಜಾ ಅವರು, ಸಂಘವು ನಡೆದುಬಂದ ಹಾದಿ, ಗಳಿಸಿದ ಬೆಳವಣಿಗೆ ಹಾಗೂ ಸಾಧನೆಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು. ಕಾಸರಗೋಡು ಕೆಥೋಲಿಕ್ ವಲಯದ ಪ್ರಧಾನ ಧರ್ಮಗುರುಗಳಾದ ವಂದನೀಯ ಹೆರಾಲ್ಡ್ ಮಸ್ಕರೇನಸ್ ಅವರು ದೀಪ ಪ್ರಜ್ವಲನೆಗೈದು ಸಭೆಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಜೀನ್ ಲವೀನಾ ಮೊಂತೆರೋ, ರಾಜು ಸ್ಟೀಫನ್ ಡಿ'ಸೋಜಾ ಮೊದಲಾದವರು ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜಾಸ್ಮಿನ್ ಡಿ'ಸೋಜಾ ಅವರು ವಾರ್ಷಿಕ ವರದಿ ಹಾಗೂ ನಿರ್ದೇಶಕ ಸ್ಟೇನಿ ಲೋಬೊ ಅವರು ಲೆಕ್ಕಪತ್ರ ಮಂಡಿಸಿದರು.

ಸಂಘದ ಉಪಾಧ್ಯಕ್ಷ ರಿಚರ್ಡ್ ಕ್ರೇಸ್ತಾ ಸ್ವಾಗತಿಸಿದರು. ಅಧ್ಯಕ್ಷ ಥೋಮಸ್ ಡಿ'ಸೋಜಾ ವಂದಿಸಿದರು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries