HEALTH TIPS

ಉದ್ಯೋಗದ ಭರವಸೆ ನೀಡಿ ವಂಚನೆ: ಫೇಸ್‌ಬುಕ್ ಮೂಲಕ ಸಂಪರ್ಕಿಸಿ ₹1.12 ಲಕ್ಷ ದೋಚಿದ ಪ್ರಕರಣ ದಾಖಲು

ಬದಿಯಡ್ಕ: ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸೀತಾಂಗೋಳಿ ಸಮೀಪದ ಬೇಳ ನಿವಾಸಿ ರಶಾದ್ ಎ.ಕೆ. ಎಂಬವರ ಬ್ಯಾಂಕ್ ಖಾತೆಯಿಂದ ₹1,12,300 ವಂಚಿಸಿರುವ ಕುರಿತು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶಾದ್ ಎ.ಕೆ. ಅವರು ನೀಡಿದ ದೂರಿನ ಆಧಾರದ ಮೇಲೆ ಬದಿಯಡ್ಕ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

2025ರ ಜೂನ್ 10ರಿಂದ ಜುಲೈ 12ರ ನಡುವಿನ ಅವಧಿಯಲ್ಲಿ ಉದ್ಯೋಗದ ಆಮಿಷವೊಡ್ಡಿದ ವಂಚಕ, ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಮೂರು ಹಂತಗಳಲ್ಲಿ ಒಟ್ಟು ₹1,12,300 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ರಶಾದ್ ಅವರು ದೂರಿನಲ್ಲಿ ವಿವರಿಸಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries