HEALTH TIPS

ಸೂರಂಬೈಲಿನಲ್ಲಿ ನ. 21ರಂದು ಶ್ರೀ ಅಯ್ಯಪ್ಪ ಭಜನಾ ಮಂದಿರದ 32ನೇ ವಾರ್ಷಿಕ ದೀಪೋತ್ಸವ, ಯಕ್ಷಗಾನ ಬಯಲಾಟ


ಸಾಮೂಹಿಕ ಶ್ರೀ ಸತ್ಯನಾರಾಯಣ ಕಲ್ಪೋಕ್ತ ಪೂಜೆ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತ್ರಿವಳಿ ಪ್ರಸಂಗಗಳ ಯಕ್ಷಗಾನ

ಕುಂಬಳೆ: ಇಲ್ಲಿನ ಪಾರ್ಥಸಾರಥಿ ನಗರದ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ ವತಿಯಿಂದ ನಡೆಸಲ್ಪಡುವ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 32ನೇ ವಾರ್ಷಿಕ ದೀಪೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಕಲ್ಪೋಕ್ತ ಪೂಜೆ ಹಾಗೂ ಯಕ್ಷಗಾನ ಬಯಲಾಟವು ನವೆಂಬರ್ 21ರ ಶನಿವಾರದಂದು ವಿಜೃಂಭಣೆಯಿಂದ ಜರುಗಲಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ: ಅಂದು ಬೆಳಿಗ್ಗೆ 6.30ಕ್ಕೆ ಪುಣ್ಯಾಹ ಶುದ್ಧಿ, 7.00ಕ್ಕೆ ಗಣಪತಿ ಹವನ, 8.00ಕ್ಕೆ ಶ್ರೀ ಸನ್ನಿಧಿಯಲ್ಲಿ ಬೆಳಗಿನ ಪೂಜೆ, 9.00ಕ್ಕೆ ಸಾಮೂಹಿಕ ಪ್ರಾರ್ಥನೆ ಹಾಗೂ 9.30ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಕಲ್ಪೋಕ್ತ ಪೂಜೆ ಆರಂಭಗೊಳ್ಳಲಿದೆ. ಮಧ್ಯಾಹ್ನ 12.00ಕ್ಕೆ ಮಂಗಳಾರತಿ, 12.30ಕ್ಕೆ ಮಧ್ಯಾಹ್ನದ ಪೂಜೆ, ಶರಣಂ ವಿಳಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


ಸಂಜೆ 6.00ಕ್ಕೆ ದೀಪಾರಾಧನೆ, 6.15ಕ್ಕೆ ದೀಪ ಪ್ರತಿಷ್ಠೆ ಮತ್ತು ವಿವಿಧ ಭಜನಾ ಸಂಘಗಳಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ರಾತ್ರಿ 9.30ಕ್ಕೆ ಮಹಾಪೂಜೆ, ವಿಶೇಷ ದೀಪೋತ್ಸವ, ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ಏರ್ಪಡಿಸಲಾಗಿದೆ.

ರಾತ್ರಿ ಯಕ್ಷಗಾನ ಬಯಲಾಟ: ರಾತ್ರಿ 10 ಗಂಟೆಯಿಂದ ಶ್ರೀ ಮಂದಿರದ ವಠಾರದ ಭವ್ಯ ರಂಗಮಂಟಪದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ 'ಯೌವನಾಶ್ವ ಕಾಳಗ, ನೀಲಧ್ವಜ ಕಾಳಗ (ಜ್ವಾಲಾಪ್ರತಾಪ) ಹಾಗೂ ಬಭ್ರುವಾಹನ ಕಾಳಗ' ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

  • ಹಿಮ್ಮೇಳ: ಭಾಗವತರಾಗಿ ಶಿವಶಂಕರ ಬಲಿಪ, ದೇವಿಪ್ರಸಾದ್ ಆಳ್ವ ತಲಪಾಡಿ, ಚಿನ್ಮಯ ಭಟ್ ಕಲ್ಲಡ್ಕ; ಚೆಂಡೆ-ಮದ್ದಳೆಯಲ್ಲಿ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ವಿಕ್ರಮ್ ಮಯ್ಯ; ಚಕ್ರತಾಳದಲ್ಲಿ ನಿಶಾಂತ್ ಜೋಗಿ ಮತ್ತು ಅಭಿಜಿತ್ ಬಂಟ್ವಾಳ ಸಹಕರಿಸಲಿದ್ದಾರೆ.

  • ಮುಮ್ಮೇಳ: ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಪ್ರಸಾದ್ ಸವಣೂರು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ವೇಣೂರು ಸದಾಶಿವ ಕುಲಾಲ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ವಾಸುದೇವ ರಂಗ ಭಟ್ ಮಧೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಶಿವರಾಜ್ ಬಜಕೂಡ್ಲು, ಬಾಲಕೃಷ್ಣ ಸೀತಾಂಗೋಳಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ಅಕ್ಷಯ ಭಟ್ ಮೂಡುಬಿದಿರೆ, ಶಶಿಧರ ಕುಲಾಲ್ ಕನ್ಯಾನ, ಸಂತೋಷ್ ಕುಮಾರ್ ಹಿಲಿಯಾಣ, ರಾಧಾಕೃಷ್ಣ ನಾವಡ ಮಧೂರು, ಉದಯಶಂಕರ ಮಜಲು ಮೊದಲಾದ ಪ್ರಸಿದ್ಧ ಕಲಾವಿದರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries