ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಇಚ್ಛಂಗೋಡು ಪಚ್ಚಂಬಳ ಸನಿಹದ ಹಿತ್ತಿಲೊಂದರಲ್ಲಿ ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ತೊಕ್ಕೊಟ್ಟಿನ ಅಶೋಕ ಡಿ'ಸೋಜ (53), ಬಂಗ್ರಮಂಜೇಶ್ವರದ ಇಬ್ರಾಹಿಂ ಕೆ (61), ಕಾಸರಗೋಡು ಕೂಡ್ಲು ಎ.ಎಂ.ಟಿ ರಸ್ತೆ ಬಳಿಯ ರಮೇಶ್ ಕೆ (56), ಹೊಸಂಗಡಿಯ ಇಬ್ರಾಹಿಂ ಮೊಯ್ದೀನ್ (60) ಮತ್ತು ಮಂಗಲ್ಪಾಡಿ ಕುಬಣೂರಿನ ಶಿವಾನಂದ (45) ಬಂಧಿತರು. ಇವರಿಂದ ಜೂಜಿಗೆ ಬಳಸಿದ್ದ 3830 ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನಂತರ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.


