ಇಂಫಾಲ್ : ಮಣಿಪುರದ ಚಾಂಡೇಲ್ ಜಿಲ್ಲೆಯಲ್ಲಿ ನಕಲಿ ಮದ್ಯ ಕುಡಿದು, ಮೂರು ದಿನಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಎಂಟೂ ಜನರ ಸಾವಿಗೆ ಕಾರಣ ಏನೆಂಬುದು ವೈದ್ಯಕೀಯವಾಗಿ ದೃಢಪಟ್ಟಿಲ್ಲ. ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೃತರು ಕುಡಿದಿದ್ದರು ಎನ್ನಲಾದ ಮದ್ಯವನ್ನು ಕಾಕಚಿಂಗ್ ಜಿಲ್ಲೆಯ ಸುಗ್ನುದಲ್ಲಿ ಖರೀದಿಸಲಾಗಿತ್ತು ಎನ್ನಲಾಗಿದೆ.


