HEALTH TIPS

ಭೂಕುಸಿತದಿಂದ ಕುಟುಂಬ, ಭಾವಿ ಪತಿಯನ್ನು ಕಳೆದುಕೊಂಡಿದ್ದ ಯುವತಿಯ ಬಾಳಿಗೆ ಹೊಸಬೆಳಕು

ಗುರುವಾಯೂರು: ತಮ್ಮ ಕುಟುಂಬದ ಒಂಬತ್ತು ಸದಸ್ಯರನ್ನು ವಯನಾಡು ಭೂಕುಸಿತದಲ್ಲಿ ಹಾಗೂ ನಿಶ್ಚಿತಾರ್ಥವಾಗಿದ್ದ ಭಾವಿ ಪತಿಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದ ಯುವತಿಯ ಬಾಳಲ್ಲಿ ಹೊಸ ಬೆಳಕು ಮೂಡಿದೆ.


ಹೌದು, ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಶ್ರುತಿ ಅವರು ಸಂದೀಪ್ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಮಾನಂತವಾಡಿ ಮೂಲದ ಸಂದೀಪ್ ಅವರು ವಯನಾಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ಸಮಾರಂಭದಲ್ಲಿ ಶ್ರುತಿ ಅವರ ಕುಟುಂಬದ ಆಪ್ತರು, ಸ್ನೇಹಿತರು ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಎಲ್‌ಡಿಎಫ್ ಸರ್ಕಾರದಲ್ಲಿ ಸಚಿವರಾಗಿದ್ದ, ವಯನಾಡು ದುರಂತದ ಬಳಿಕ ಪುನರ್ವಸತಿ ಕಾರ್ಯಗಳ ಉಸ್ತುವಾರಿ ವಹಿಸಿದ್ದ ಸಿಪಿಐ ಶಾಸಕ ಕೆ. ರಾಜನ್ ಅವರು ಶ್ರುತಿ ಪೋಷಕರ ಸ್ಥಾನದಲ್ಲಿ ನಿಂತು ಮದುವೆ ಕಾರ್ಯಗಳನ್ನು ನೆರೆವೇರಿಸಿಕೊಟ್ಟಿದ್ದಾರೆ.

'ನನ್ನ ಜೀವನದ ಎಲ್ಲ ಕಹಿ ಘಟನೆಗಳ ಬಗ್ಗೆ ತಿಳಿದಿದ್ದರೂ, ಸಂದೀಪ್ ನನ್ನನ್ನು ಮದುವೆಯಾಗಲು ಮುಂದೆ ಬಂದಿದ್ದಾರೆ. ನಾವಿಬ್ಬರೂ ಒಟ್ಟಾಗಿ ಸುಖವಾಗಿ ಬಾಳುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಶ್ರುತಿ ಸಂತಸ ವ್ಯಕ್ತಪಡಿಸಿದ್ದಾರೆ.

ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಶ್ರುತಿ ಅವರು ಪೋಷಕರು, ಸಹೋದರಿ ಸೇರಿದಂತೆ ಕುಟುಂಬದ ಒಂಬತ್ತು ಸದಸ್ಯರನ್ನು ಕಳೆದುಕೊಂಡಿದ್ದರು. ಈ ದುರಂತದಲ್ಲಿ ಅವರ ಮನೆಯೂ ಸಂಪೂರ್ಣವಾಗಿ ನಾಶವಾಗಿತ್ತು. ಈ ದುರ್ಘಟನೆ ಕೇರಳಂನಾದ್ಯಂತ ಜನರ ಮನಸ್ಸನ್ನು ಕಲಕಿತ್ತು.

ಕುಟುಂಬದವರನ್ನು ಕಳೆದುಕೊಂಡ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಶ್ರುತಿ ಅವರ ಭಾವಿ ಪತಿ ಜೆನ್ಸನ್ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಈ ದುರಂತವು ಶ್ರುತಿ ಅವರನ್ನು ಮತ್ತಷ್ಟು ಘಾಸಿಗೊಳಿಸಿತ್ತು.

ಶ್ರುತಿ ಅವರ ಸಂಕಷ್ಟಕ್ಕೆ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮಿಡಿದಿತ್ತು. ಶ್ರುತಿ ಅವರನ್ನು ಕಂದಾಯ ಇಲಾಖೆಯಲ್ಲಿ ಗುಮಾಸ್ತ ಹುದ್ದೆಗೆ ನೇಮಕ ಮಾಡಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries