HEALTH TIPS

ಅಡೂರಿನ ಡಾ. ಕೆ. ಎನ್. ಅಡಿಗರಿಗೆ ಪ್ರತಿಷ್ಠಿತ ಧನ್ವಂತರಿ ಪ್ರಶಸ್ತಿ ಪ್ರದಾನ

ಮುಳ್ಳೇರಿಯ: ನಾಡಿನ ಖ್ಯಾತ ಸಾಂಸ್ಕøತಿಕ ಗಣ್ಯರು, ಸಂಘಟಕರು ಹಾಗೂ ನಿರೂಪಕರಾದ ಅಡೂರಿನ ಡಾ. ಕೆ. ಎನ್. ಅಡಿಗ ಅವರಿಗೆ ಉಪಾಧ್ಯ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಿತ 'ಧನ್ವಂತರಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು.


ಮುಳ್ಳೇರಿಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರತಿಷ್ಠಾನದ ಪರವಾಗಿ ರಾಮಚಂದ್ರ ಉಪಾಧ್ಯ ಅವರು ಡಾ. ಕೆ. ಎನ್. ಅಡಿಗರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.

ಕನ್ನಡ ಮತ್ತು ತುಳು ಸಾಂಸ್ಕೃತಿಕ ರಂಗದಲ್ಲಿ ನಿರರ್ಗಳ ನಿರೂಪಕರಾಗಿ, ದಕ್ಷ ಸಂಘಟಕರಾಗಿ ಹಾಗೂ ನಿರಂತರ ಸಮಾಜಮುಖಿ ಚಟುವಟಿಕೆಗಳ ಮೂಲಕ ಡಾ. ಕೆ. ಎನ್. ಅಡಿಗ ಅವರು ಸಲ್ಲಿಸಿರುವ ಅಪಾರ ಸೇವೆ ಮತ್ತು ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಈ ಪುರಸ್ಕಾರವನ್ನು ಸಮರ್ಪಿಸಲಾಗಿದೆ.

ಸಮಾರಂಭದಲ್ಲಿ ಪ್ರಮುಖರಾದ ಡಾ. ಉದಯ ಗರುಡಾಚಾರ್, ಡಾ. ಟಿ. ಎ. ಬಾಲಕೃಷ್ಣ ಅಡಿಗ, ಕಾರ್ಕಡ ಗಣೇಶ ಐತಾಳ್, ಗೋಕುಲ ದಾಸ್ ಪೈ, ಜಿ. ಶ್ರೀನಿವಾಸ ರಾವ್, ಡಾ. ಕಿಶೋರ್ ಕುಮಾರ್ ಹಾಗೂ ನೀಲಕಂಠ ಅಡಿಗ ಉಪಸ್ಥಿತರಿದ್ದು ಶುಭ ಹಾರೈಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries