HEALTH TIPS

ರಫ್ತಿಗೆ ಆದ್ಯತೆ ನೀಡಲು ಪ್ರಧಾನಿ ಕರೆ

ನವದೆಹಲಿ:   ದೇಶದ ಉದ್ಯಮಗಳು ಆಂತರಿಕ ಮಾರುಕಟ್ಟೆಯ ಆಚೆಗೂ ನೋಟ ಹರಿಸಬೇಕು, ತಯಾರಿಕೆ ಮತ್ತು ಮೌಲ್ಯವರ್ಧನೆಯನ್ನು ಹೆಚ್ಚಿಸಬೇಕು, ವ್ಯಾಪಾರ ಒಪ್ಪಂದಗಳನ್ನುಬಳಸಿಕೊಂಡು ರಫ್ತು ವಹಿವಾಟು ವಿಸ್ತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.


ಉದ್ಯಮಗಳ ದೀರ್ಘಾವಧಿ ಹೂಡಿಕೆ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ರಾಷ್ಟ್ರದ ಹಿತಾಸಕ್ತಿಯನ್ನು ಅಡಿಪಾಯವಾಗಿ ಇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

‘ಫಿಕ್ಕಿ’ಯ ವಾರ್ಷಿಕ ಮಹಾಸಭೆ ಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಇನ್ನಷ್ಟು ಸುಧಾರಣೆ ಗಳನ್ನು ತರುವುದಕ್ಕೆ ಅಗತ್ಯವಿರುವ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.

‘ಇದು ಹಳೆಯ ಸರ್ಕಾರವಲ್ಲ. ಈ ಸರ್ಕಾರ ನಿಮ್ಮ ಸ್ನೇಹಿತ’ ಎಂದು ಅವರು ಬಣ್ಣಿಸಿದ್ದಾರೆ. ಉದ್ಯಮಗಳು ಮುಂದಿನ ಎರಡು ದಶಕಗಳನ್ನು ದೇಶಿ ಸಾಮರ್ಥ್ಯ ವೃದ್ಧಿಗೆ, ಆಮದು ಅವಲಂಬನೆ ಕಡಿಮೆ ಮಾಡಿಕೊಳ್ಳಲು ಹಾಗೂ ಆಂತರಿಕವಾಗಿ ಮತ್ತು ಜಾಗತಿಕವಾಗಿ ಬರುವ ಬೇಡಿಕೆಗಳಿಗೆ ಸ್ಪಂದಿಸಲು ಸಜ್ಜಾಗಲು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ಔಷಧ, ಉಕ್ಕು, ಅಲ್ಯೂಮಿನಿಯಂ, ಕೃಷಿ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳ ಆಮದನ್ನು ನಿಲ್ಲಿಸಿ, ದೇಶಿ ಉತ್ಪಾದನೆಯ ಮೇಲೆ ಅವಲಂಬಿತ ವಾಗಲು ಅವಕಾಶ ಇದೆ. ಈ ವಲಯಗಳ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆ ಗಳಿಗೆ ಒಯ್ಯುವ ಅವಕಾಶವೂ ಇದೆ ಎಂದು ಅವರು ಹೇಳಿದ್ದಾರೆ.

ಕಾರ್ಪೊರೇಟ್ ವಲಯವು ಕೃಷಿ ಮತ್ತು ಆಹಾರ ಸಂಸ್ಕರಣೆ ವಲಯದಲ್ಲಿ ಹೂಡಿಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶವು ಬೃಹತ್ ವಿಸ್ತೀರ್ಣ ಹೊಂದಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕೃಷಿ ಉತ್ಪನ್ನಗಳ ರಫ್ತು ಪಾಲು ಶೇ 2ರಿಂದ ಶೇ 2.5ರ ನಡುವೆ ಇದೆ ಎಂದು ಅವರು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries