HEALTH TIPS

ಮೂರು ಗಂಟೆಗಳಲ್ಲಿ ಮೂರು ಡ್ರೋನ್‌ ಗಳನ್ನು ಹೊಡೆದುರುಳಿಸಿದ ಸೌದಿ ವಾಯು ರಕ್ಷಣಾ ವ್ಯವಸ್ಥೆ: ವರದಿ

ರಿಯಾದ್‌:  ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದ ಮೇಲೆ ಹಾರಿಬಂದ ಮೂರು ಡ್ರೋನ್‌ ಗಳನ್ನು ಸೌದಿ ನೇತೃತ್ವದ ಒಕ್ಕೂಟ ಪಡೆಗಳು ಕೇವಲ ಮೂರು ಗಂಟೆಗಳ ಅಂತರದಲ್ಲಿ ಹೊಡೆದುರುಳಿಸಿವೆ ಎಂದು ಒಕ್ಕೂಟ ತಿಳಿಸಿದೆ Aljazeera ವರದಿ ಮಾಡಿದೆ.

ಯೆಮೆನ್‌ ನ ಹೂತಿಗಳ ವಿರುದ್ಧ ಹೋರಾಡುತ್ತಿರುವ ಸೌದಿ ಬೆಂಬಲಿತ ಒಕ್ಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್‌-ಮಲ್ಕಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಪೂರ್ವ ಪ್ರಾಂತ್ಯದ ಮೇಲೆ ಹಾರುತ್ತಿದ್ದ ಮತ್ತೊಂದು ಡ್ರೋನ್ ಅನ್ನು ಪಡೆಗಳು ತಡೆದು ನಾಶಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಮೂರು ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಹೊಡೆದುರುಳಿಸಲಾದ ಮೂರನೇ ಡ್ರೋನ್ ಇದಾಗಿದೆ. ಇದೇ ಅವಧಿಯಲ್ಲಿ ರಿಯಾದ್‌ನತ್ತ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಒಕ್ಕೂಟ ಹೇಳಿಕೊಂಡಿದೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries