ಕಾಸರಗೋಡು: 'ಬೇಕಲ ಇಂಟರ್‌ನ್ಯಾಷನಲ್ ಬೀಚ್ ಫೆಸ್ಟ್ 2K26' ಉತ್ಸವದ ಸಂಘಟನಾ ಸಮಿತಿ ಕಚೇರಿಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬೇಕಲ ಬೀಚ್ ಪಾರ್ಕ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಪಳ್ಳಿಕ್ಕರ ಗ್ರಾಮ ಪಂಚಾಯತ್ ಅಧ್ಯಕ್ಷೆ ಟಿ. ಶೋಭನಾ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ. ನೀಲಕಂಠನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಚೇರಿ ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಪಿ.ಎಂ. ಶಾಫಿ ಸ್ವಾಗತಿಸಿದರೆ, ಸಂಚಾಲಕ ಹಮೀದ್ ಮಾಂಗಾಡ್ ವಂದಿಸಿದರು.
ಕಾರ್ಯಕ್ರಮದಲ್ಲಿ ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರನ್ ನಾಲಾಂವಾತುಕ್ಕಲ್, ಪಳ್ಳಿಕ್ಕರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕೆ. ರಶೀದಾ, ರವೀಂದ್ರನ್ ಕರಿಚ್ಚೇರಿ, ಸಿದ್ದೀಖ್ ಪಳ್ಳಿಪ್ಪುಳ, ವಾಸುದೇವ ಶೆಣೈ, ಪಿ.ಎ. ಇಬ್ರಾಹಿಂ, ಬಿಆರ್‌ಡಿಸಿ (BRDC) ಜನರಲ್ ಮ್ಯಾನೇಜರ್ ಕೆ.ಎಂ. ರವೀಂದ್ರನ್, ವ್ಯವಸ್ಥಾಪಕರಾದ ಯು.ಎಸ್. ಪ್ರಸಾದ್, ಎಂ. ರಜಿತಾ, ಸಹಾಯಕ ವ್ಯವಸ್ಥಾಪಕರಾದ ಪಿ. ಸುನಿಲ್‌ಕುಮಾರ್, ಕೆ.ಎನ್. ಸಜಿತ್ ಕುಮಾರ್ ಸೇರಿದಂತೆ ಹಲವು ರಾಜಕೀಯ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಬಾರಿಯ ಬೇಕಲ ಬೀಚ್ ಫೆಸ್ಟ್ ಡಿಸೆಂಬರ್ 23ರಿಂದ 31ರವರೆಗೆ ನಡೆಯಲಿದೆ.


