HEALTH TIPS

ಕುಂಬಳೆ ಉಪಜಿಲ್ಲಾ ಕಲೋತ್ಸವ: ಕಯ್ಯಾರರ ಕವನ ಮೇಳೈಸಿದ ಅಧ್ಯಾಪಕರ ಸ್ವಾಗತ ಗೀತೆ ಗಮನಸೆಳೆತ

ಬದಿಯಡ್ಕ: ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಆರಂಭಗೊಂಡ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಅಧ್ಯಾಪಕ ವೃಂದದವರು ಪ್ರಸ್ತುತಪಡಿಸಿದ ಬಹುಭಾಷಾ ಸ್ವಾಗತ ಗೀತೆ ಸಭಿಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ಬಹುಭಾಷಾ ಸಂಗಮ ಭೂಮಿ ಗಡಿನಾಡು ಕಾಸರಗೋಡಿನ ವಿಶಿಷ್ಟ ಸಂಸ್ಕøತಿ ಮತ್ತು ಸೌಹಾರ್ದ ಪರಂಪರೆಗೆ ಕನ್ನಡಿ ಹಿಡಿಯುವಂತೆ ಕನ್ನಡ, ಮಲಯಾಳ ಹಾಗೂ ತುಳು ಭಾಷೆಗಳ ಸುಮಧುರ ಸಮ್ಮಿಲನದಲ್ಲಿ ಈ ಭಾವಪೂರ್ಣ ಸ್ವಾಗತ ಗೀತೆಯನ್ನು ರಚಿಸಲಾಗಿತ್ತು. ಅಧ್ಯಾಪಕರು ವೇದಿಕೆಯಲ್ಲಿ ಅತ್ಯಂತ ಶ್ರುತಿಬದ್ಧವಾಗಿ ಗೀತೆಯನ್ನು ಹಾಡಿ ರಂಜಿಸಿದರು.

ವಿಶೇಷವಾಗಿ, ಗೀತೆಯ ಮಧ್ಯೆ ರಾಷ್ಟ್ರಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಚಿರಪರಿಚಿತ ಕವನ "ಐಕ್ಯವೊಂದೇ ಮಂತ್ರ" ಸಾಲುಗಳನ್ನು ಅರ್ಥಪೂರ್ಣವಾಗಿ ಸಂಯೋಜಿಸಿದ್ದು, ನೆರೆದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ನಾಡು, ನುಡಿ ಮತ್ತು ದೇಶಪ್ರೇಮದ ನವೋಲ್ಲಾಸವನ್ನು ಇಮ್ಮಡಿಗೊಳಿಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries