ಮಂಜೇಶ್ವರ: ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ವೃತ್ತಿ ಪರಿಚಯ ಮೇಳದಲ್ಲಿ ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಳ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ (ವಿಜ್ಞಾನ ವಿಭಾಗ) ವಿದ್ಯಾರ್ಥಿ ಸೃಜನ್ ಎಂ. ಬಿ. ಪ್ರಥಮ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ನವೆಂಬರ್ 9ರಂದು ನೈಮರ್ಮೂಲೆಯ ತಂಬಿಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ, ಹೈಯರ್ ಸೆಕೆಂಡರಿ ವಿಭಾಗದ 'ಇನ್ನೋವೇಟಿವ್ ವರ್ಕಿಂಗ್ ಮಾಡೆಲ್' (ನವೀನ ಮಾದರಿ) ವಿಭಾಗದಲ್ಲಿ ಭಾಗವಹಿಸಿದ ಸೃಜನ್ 'ಎ' ಗ್ರೇಡ್ನೊಂದಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.
ಕೊಡ್ಲಮೊಗರಿನ ಪ್ರತಿಭೆಯಾಗಿರುವ ಈತ, ಪಾತೂರಿನ ಬಾಕ್ರಬೈಲ್ ಎ.ಯು.ಪಿ ಶಾಲೆ ಹಾಗೂ ಕೊಡ್ಲಮೊಗರಿನ ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾನೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸೃಜನ್ ಸಾಧನೆಗೆ ಶ್ರೀಮತ್ ಅನಂತೇಶ್ವರ ದೇವಳ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

.jpg)
